ಯಲ್ಲಾಪುರ: ಡ್ರೋನ್ ಎಂದರೆ ಕೇವಲ ಸೈನ್ಯ, ಪೊಲೀಸ್, ಸರ್ವೇಗಳೇ ನೆನಪಾಗೋದು ಸಹಜ. ಆದರೆ ಯಲ್ಲಾಪುರದ ಗ್ರಾಮೀಣ ಪ್ರದೇಶದ ಮಕ್ಕಳು ಚಿಕ್ಕ ವಯಸ್ಸಲ್ಲೇ ಡೋನ್ ಬಗ್ಗೆ ಆಸಕ್ತಿವಹಿಸಿ ಕಲಿತಿದ್ದಾರೆ.
ಆಗಸ್ 360 ಎಂಬ ವಿಜ್ಞಾನಾಸಕ್ತರ ತಂಡವೊಂದು ಶಾಲಾ ಮಕ್ಕಳಿಗೆ ಡ್ರೋನ್ ತಯಾರಿಕಾ ಕ್ಯಾಂಪ್ ಹಮ್ಮಿಕೊಂಡಿತ್ತು.
ಯಲ್ಲಾಪುರದ ಯುಕೆ ನೇಚರ್ ಸ್ಟೇಯಲ್ಲಿ ನಡೆದ ಈ ಡ್ರೋನ್ ಟ್ರೇನಿಂಗ್ ಕ್ಯಾಂಪ್‌ನಲ್ಲಿ ಹತ್ತಾರು ಮಕ್ಕಳು ಡೋನ್ ಹೇಗೆ ಹಾರುತ್ತೆ? ಡೋನ್ ಹಾರಿಸೋದು ಹೇಗೆ? ಎಲ್ಲರೂ ಡ್ರೋನ್ ತಯಾರಿಸಬಹುದೇ? ಎಂಬ ಮಾಹಿತಿ ಪಡೆದರು. ಮಕ್ಕಳು ತಮ್ಮ ಕೈಯಿಂದಲೇ ಡೋನ್ ತಯಾರಿಸಿ ಅವರೇ ಹಾರಿಸಿ ಹಾರಿಸಿ ಖುಷಿಪಟ್ಟರು.
ಆಗಸ್ 360 ಅನ್ನೋದು ವಿಜ್ಞಾನವನ್ನು ಅಧ್ಯಯನ ಮಾಡೋಕೆ ಯುವಕರೇ ಕಟ್ಟಿಕೊಂಡಿರೋ ಪುಟ್ಟ ತಂಡವಾಗಿದೆ. ಶಿರಸಿಯ ಭೈರುಂಬೆಯ ಶಾರದಾಂಬಾ ಹೈಸ್ಕೂಲ್ ಹೆಡ್ ಮಾಸ್ಟರ್ ವಸಂತ ಹೆಗಡೆ ಸ್ಥಾಪಿಸಿದ ಈ ಸಂಸ್ಥೆ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಅಧ್ಯಯನ ವಾತಾವರಣ ಹುಟ್ಟುಹಾಕುತ್ತಿದೆ. ಈ ತರಬೇತಿ ಶಿಬಿರದಲ್ಲಿ ಶಿರಸಿ ಮತ್ತು ಸಿದ್ದಾಪುರದ ಸರ್ಕಾರಿ ಶಾಲೆಗಳನ್ನು ಸೇರಿ ಖಾಸಗಿ ಶಾಲೆಗಳ ಹತ್ತಾರು ವಿದ್ಯಾರ್ಥಿಗಳು ಡ್ರೋನ್ ತರಬೇತಿ ಪಡೆದಿದ್ದಾರೆ.