Slide
Slide
Slide
previous arrow
next arrow

ಶಿವಾಜಿ ಮಹಾರಾಜ್ ಯುವಜನತೆಗೆ ಆದರ್ಶ: ಪ್ರಭುಲಿಂಗ ಕವಳಿಕಟ್ಟಿ

300x250 AD

ಕಾರವಾರ: ನಗರದ ಮಯೂರವರ್ಮ ವೇದಿಕೆ, ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಜಿಲ್ಲಾಆಡಳಿತ, ಜಿಲ್ಲಾ ಪಂಚಾಯತ, ಹಾಗೂ ಕರ್ನಾಟಕ ರಾಜ್ಯ ಕ್ಷತ್ರಿಯ ಮರಾಠ ಪರಿಷತ್ ಇವರ ಸಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2022-23ನೇ ಸಾಲಿನ ರಾಜ್ಯಮಟ್ಟದ ಛತ್ರಪತಿ ಶಿವಾಜಿ ಜಯಂತಿಯನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಜ್ಯೋತಿ ಬೆಳಗಿಸಿ, ಶಿವಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,ಛತ್ರಪತಿ ಶಿವಾಜಿ ಮಹಾರಾಜರು ದೇಶಭಕ್ತಿ, ಶೌರ್ಯ ಹಾಗೂ ಸಾಹಸಕ್ಕೆ ಹೆಸರಾಗಿದ್ದರು.ಅವರು ಯಾವುದೇ ಒಂದು ಕ್ಷೇತ್ರಕ್ಕೆ ಯಾವುದೇ ಒಂದು ರಾಜ್ಯಕ್ಕೆ ಹಾಗೂ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾಗದೆ ಇವತ್ತಿನ ಯುವ ಜನತೆಯ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು.

17ನೇ ಶತಮಾನದಲ್ಲಿ ಪರಕೀಯರ ದಬ್ಬಾಳಿಕೆಯಿಂದ ಈ ದೇಶವು ನಲುಗಿದ ಸಂದರ್ಭದಲ್ಲಿ ದೇಶವನ್ನು ರಕ್ಷಿಸಿದ್ದು ಶಿವಾಜಿಯವರ ಧೈರ್ಯ, ಶೌರ್ಯ ಇವತ್ತಿನ ಯುವ ಜನಾಂಗಕ್ಕೆ ಪ್ರೇರೇಪಣೆಯಾಗಿದೆ ಎಂದರು. ಅಷ್ಟೇ ಅಲ್ಲದೆ ಆಡಳಿತವನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎಂಬುದನ್ನು ಶಿವಾಜಿಯವರು 17ನೇ ಶತಮಾನದಲ್ಲಿಯೇ ನಮಗೆ ಮಾರ್ಗದರ್ಶನ ಹಾಕಿಕೊಟ್ಟಿದ್ದಾರೆ. ಆ ಮಾರ್ಗದರ್ಶನದಲ್ಲಿ ಇಂದು ನಾವುಗಳು ಸಾಗುತ್ತಿದ್ದೇವೆ ಅವರ ದೂರದೃಷ್ಟಿಯನ್ನು ನಾವುಗಳು ಇಲ್ಲಿ ಸ್ಮರಿಸಬೇಕಾಗುತ್ತದೆ ಎಂದರು. ಅದೇ ರೀತಿ ಭಾಷಾ ಪ್ರೇಮವನ್ನು ನಾವೆಲ್ಲರೂ ಹೇಗೆ ಗೌರವಿಸಬೇಕು ಮತ್ತು ಹೇಗೆ ಮೈಗೂಡಿಸಿಕೊಳ್ಳಬೇಕು ಎಂಬುದನ್ನು ಇಂತಹ ಮಹನೀಯರಿಂದ ಕಲಿತುಕೊಳ್ಳುವುದು ಇನ್ನೂ ಇದೆ ಎಂದರು.

ಬಳಿಕ ಚಿಕ್ಕಮಗಳೂರಿನ ಶಾಸಕ ಸಿಟಿ ರವಿ ಮಾತನಾಡಿ, ಶಿವಾಜಿ ಮಹಾರಾಜರು ಹುಟ್ಟ ಶ್ರೀಮಂತರೇನಲ್ಲ ಅವರು ಭರತವಂಶದಲ್ಲಿ ಜನಸಿದವರು. ಪರಕೀರ ಸಾಮ್ರಾಜ್ಯವನ್ನು ದಮನಮಾಡಿ ಹಿಂದವೀ ಸಮಾಜವನ್ನು ನಿರ್ಮಾಣ ಮಾಡಿದವರಲ್ಲಿ ಶಿವಾಜಿಯವರು ಅಗ್ರಗಣ್ಯ ರಾಷ್ಟ್ರ ನಾಯಕರ ಸಾಲಿಗೆ ಸೇರಿದ ಮೊದಲಿಗರು, ಸನಾತನ ಸಮಾಜದ ಪುನಃರುತ್ಥಾನಕ್ಕಾಗಿ ಶಿವಾಜಿ ತಮ್ಮ ಜೀವನವನ್ನು ಪಣವಾಗಿಟ್ಟಿದ್ದರು. ಶಿವಾಜಿಯವರು ದೇಶ ಮೊದಲು ಎಂಬ ಮನೋಭಾವನೆಯನ್ನು ಹೊಂದಿದ ಮಹಾನ್ ರಾಷ್ಟ್ರ ನಾಯಕ. ಇದರಿಂದ ರಾಷ್ಟ್ರವು ಕುತಂತ್ರಗಳಿಂದ ಮುಕ್ತವಾಗಿರುತ್ತದೆ ಎಂದರು. ಶಿವಾಜಿಯಂತಹ ರಾಷ್ಟ್ರ ಪ್ರೇಮಿಯನ್ನು ನಾವು ಕೇವಲ ಒಂದು ಜಾತಿಗೆ, ಒಂದು ಭಾಷೆಗೆ, ಒಂದು ಪ್ರದೇಶಕ್ಕೆ ಸೀಮಿತಗೊಳಿಸಬಾರದು ಅವರನ್ನು ರಾಷ್ಟ್ರದ ನಾಯಕನಾಗಿ ಬಿಂಬಿಸುವುದು ಅತಿ ಮುಖ್ಯವಾಗಿದೆ ಎಂದರು. ಸ್ವತಂತ್ರ ಭಾರತದ ಸುರಕ್ಷೆಗೆ ನಾವೆಲ್ಲರೂ ನಮ್ಮ ಬದುಕಿನಲ್ಲಿ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ರಕ್ಷಣೆಗೆ ಮುಂದಾಗೋಣ ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಈ ದೇಶಕ್ಕೆ ಸಾಕಷ್ಟಿದೆ. ಅಂತಹ ಮಹಾನ್ ನಾಯಕ ಈ ಜಿಲ್ಲೆಗೂ ಕೂಡ ಭೇಟಿ ನೀಡಿದ್ದು ನಮ್ಮೆಲ್ಲರ ಸುದೈವ ಎಂದರು.

300x250 AD

ಬಳಿಕ ವಿಧಾನಪರಿಷತ್ ಸದಸ್ಯ ಗಣಪತಿ ಉಡುವೇಕ‌ ಮಾತನಾಡಿ ಶಿವಾಜಿ ಮಹಾರಾಜರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯೋಣ ಎಂದರು ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಜಯಂತಿ ಯಶಸ್ವಿಗೆ ಶ್ರಮಿಸಿದ ಅಧಿಕಾರಿ ವರ್ಗಕ್ಕೆ ಹಾಗೂ ಸಮುದಾಯದ ಬಾಂಧವರಿಗೆ ಕೃತಜ್ಞತಾ ಸಲ್ಲಿಸಿದರು.

ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸದಾಶಿವಗಡದ ದುರ್ಗಾ ದೇವಸ್ಥಾನದಲ್ಲಿ ಶಾಸಕಿ ರೂಪಾಲಿ ನಾಯ್ಕ ದುರ್ಗಾ ದೇವಿಗೆ ಪೂಜೆ ನೆರೆವೇರಿಸಿದರು. ನಂತರ ಕಾಳಿ ರಿವರ್

ಗಾರ್ಡನನಿಂದ ಆಯೋಜಿಸಲಾಗಿದ್ದ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶೋಭಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಜಾಥಾವು ಕಾಳಿ ರಿವರ್ ಗಾರ್ಡನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಿ ಮಯೂರವರ್ಮಾ ವೇದಿಕೆಗೆ ಆಗಮಿಸಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಈಶ್ವರ್ ಕಾಂದೂ, ಉಪ ವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ,ನಗರಸಭೆ ಅಧ್ಯಕ್ಷ ನಿತೀನ ಪಿಕಳೆ, ನಗರಸಭೆ ಉಪಾಧ್ಯಕ್ಷರ ಪ್ರಕಾಶ ನಾಯ್ಕ, ಕರ್ನಾಟಕ ರಾಜ್ಯ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷರ ಸಂಜೀವಕುಮಾರ್ ಬೋಬಾಟೆ, ಜಿಲ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ, ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಮುದಾಯದ ಬಾಂದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top