• Slide
    Slide
    Slide
    previous arrow
    next arrow
  • ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ: 6 ಸಾವಿರಕ್ಕೂ ಅಧಿಕ ಭಕ್ತರು ಭಾಗಿ

    300x250 AD

    ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ 6 ಸಾವಿರಕ್ಕೂ ಅಧಿಕ ಶಿವ ಭಕ್ತರು ಚೋಳೇಶ್ವರ ದೇವಸ್ಥಾನದಿಂದ ಮುರ್ಡೇಶ್ವರದ ಶಿವ ದೇಗುಲದ ತನಕ ಬರಿಗಾಲಿನಲ್ಲಿ ಸುಮಾರು 18 ಕಿಲೋ ಮೀಟರ್ ದೂರ ಪಾದಯಾತ್ರೆ ನಡೆಸಿ ದೇವರ ದರ್ಶನದೊಂದಿಗೆ ಆಶೀರ್ವಾದ ಪಡೆದುಕೊಂಡರು.
    ರಂಜನ್ ಇಂಡಿಯನ್ ಗ್ಯಾಸ್ ಏಜೆನ್ಸಿಯು ಸತತ 13 ವರ್ಷದಿಂದ ಶಿವರಾತ್ರಿಯಂದು ಭಟ್ಕಳದಿಂದ ಮುರುಡೇಶ್ವರಕ್ಕೆ ಪಾದಯಾತ್ರೆ ಆಯೋಜಿಸಿಕೊಂಡು ಬರುತ್ತಿದೆ.

    ಅದರಂತೆ ಈ ಬಾರಿಯೂ ನಸುಕಿನ ಜಾವ 4 ಗಂಟೆಗೆ ಚೋಳೇಶ್ವರ ದೇವಸ್ಥಾನದಿಂದ ದೇವರ ದರ್ಶನ ಪಡೆದು ಪಾದಯಾತ್ರೆ ಕೈಗೊಂಡ ಭಕ್ತರು, ಚೆನ್ನಪಟ್ಟಣ ಹನುಮಂತ ದೇವಸ್ಥಾನ, ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ, ಹೆದ್ದಾರಿ-66ರ ಮಾರ್ಗವಾಗಿ ಶಿರಾಲಿ, ಸಾರದಹೊಳೆ, ಬಸ್ತಿಯ ಮೂಲಕ ಮುರ್ಡೇಶ್ವರ ದೇವಸ್ಥಾನಕ್ಕೆ ತಲುಪಿದರು.
    ಮುರುಡೇಶ್ವರ ತಲುಪಿದ ಪಾದಯಾತ್ರಿಕರು ಅಲ್ಲಿ ಸಮುದ್ರ ಸ್ನಾನ ಕೈಗೊಂಡು, ಅತ್ಯಂತ ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದರು. ಪ್ರತೀ ವರ್ಷವೂ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೆ ಇರುವುದು ಯಶಸ್ವಿ ಸಂಘಟನೆಯ ಉದಾಹರಣೆಯಾಗಿದೆ. ಪಾದಯಾತ್ರೆಯುದ್ದಕ್ಕೂ ಕುಡಿಯಲು ನೀರು, ಹಣ್ಣು- ಹಂಪಲು, ಪಾನೀಯವನ್ನು ಒದಗಿಸಲಾಯಿತು. ಮುಂಜಾಗೃತಾ ಕ್ರಮವಾಗಿ ಅಂಬ್ಯುಲೆನ್ಸ್ ವ್ಯವಸ್ಥೆಯ ಜೊತೆಗೆ ಈ ಬಾರಿ ಮೊಬೈಲ್ ಶೌಚಗೃಹದ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿತ್ತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top