Slide
Slide
Slide
previous arrow
next arrow

ಬಜೆಟ್’ನಲ್ಲಿ ಶಿರಸಿ ಜಿಲ್ಲೆಯ ಪ್ರಸ್ತಾಪವೇ ಇಲ್ಲ: ಉಪೇಂದ್ರ ಪೈ ಬೇಸರ

300x250 AD

ಶಿರಸಿ: ಶಿರಸಿ ಜಿಲ್ಲೆ ಈ ಬಜೆಟ್’ನಲ್ಲಿ ಘೋಷಣೆ ಆಗಬಹುದು ಅನ್ನುವ ನಿರೀಕ್ಷೆ ಇತ್ತು. ಕಳೆದ 38 ವರ್ಷಗಳಿಂದ ನಡೆದಂತಹ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟದ ಪ್ರಯತ್ನಕ್ಕೆ ಕೊನೆಗೂ ಸರ್ಕಾರ ಕೊಟ್ಟಿದ್ದು ಏನು ಇಲ್ಲ. ತುಂಬಾ ಬೇಸರಕರವಾದಂತಹ ಈ ಬಜೆಟ್ ಶಿರಸಿ ಜಿಲ್ಲಾ ಹೋರಾಟ ಸಮಿತಿಗೆ ಎಂದು ಉಪೇಂದ್ರ ಪೈ ಟ್ರಸ್ಟ್ ಅಧ್ಯಕ್ಷ ಹಾಗೂ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಹೇಳಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಯಿಸಿದ ಅವರು, ಶಿರಸಿ ಜಿಲ್ಲೆ ಆಗತಕ್ಕಂತ ಭಾಗಕ್ಕೂ ಕೂಡ ಬಜೆಟಿನಲ್ಲಿ ಏನು ಘೋಷಣೆ ಆಗಿಲ್ಲದಿರುವುದು ಬಹಳ ಬೇಸರದ ಸಂಗತಿ . ಜಿಲ್ಲೆಯನ್ನಾಗಿ ಘೋಷಿಸುವುದು ಮತ್ತು ಜಿಲ್ಲೆಯನ್ನಾಗಿ ಮಾಡುವುದು ಈಗಿನ ಯಾವ ಜನಪ್ರತಿನಿಧಿಗಳಿಗು ಆಸಕ್ತಿ ಇಲ್ಲದಂತಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜನತೆಯೊಂದಿಗೇ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರವನ್ನು ಅತಿ ಶೀಘ್ರದಲ್ಲೇ ತೆಗೆದುಕೊಳ್ಳುತ್ತೇವೆ. ಈ ಬಜೆಟ್ ಇಂದ ನಮ್ಮ ಆಸೆ ನಿರಾಸೆಯಾಗಿದೆ ಎಂದಿದ್ದಾರೆ.

300x250 AD

ಜೊತೆಯಲ್ಲಿ ಪರಿಸರ ವಿಶ್ವ ವಿದ್ಯಾಲಯವನ್ನು ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಈ ಭಾಗದ ಎಷ್ಟು ಜನರಿಗೆ ಉದ್ಯೋಗವಕಾಶ ಸಿಗಬಹುದು ಅಥವಾ ನೌಕರಿ ಸಿಗಬಹುದು ಇದರ ಕಾರ್ಯವ್ಯಾಪಿ ಏನು ಮತ್ತು  ವರ್ಷಕ್ಕೆ ಎಷ್ಟು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಕ್ಕಾಗಿ ಬರುತ್ತಾರೆ ಎನ್ನುವುದು ಸ್ವಲ್ಪ ವಿಚಾರ ಮಾಡುವ ಸಂಗತಿ. ನಮ್ಮ ಭಾಗದ ಶಾಸಕರು ವಿಧಾನಸಭೆಯ ಉನ್ನತ ಸ್ಥಾನದಲ್ಲಿ ಇದ್ದು ಕೂಡ ಒಂದು ದಿನವು ಪ್ರಸ್ತಾವನೆ ಆಗಿಲ್ಲ. ಒಂದು ಪ್ರಸ್ತಾವನೆ ಮಾಡಬಹುದಿತ್ತು. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಸಾರ್ವಜನಿಕವಾಗಿ ಉತ್ತರ ಸಿಗುತ್ತದೆ. ಶಿರಸಿ ಜಿಲ್ಲೆ ಆಗೇ ಆಗುತ್ತೆ ಎಂದು ಉಪೇಂದ್ರ ಪೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top