Slide
Slide
Slide
previous arrow
next arrow

ಸಾಮಾಜಿಕ ಪರಿಶೋಧನೆಯಿಂದ ಸಕಾರಾತ್ಮಕ ಫಲಿತಾಂಶ: ಉಮೇಶ ಮುಂಡಳ್ಳಿ

300x250 AD

ಹೊನ್ನಾವರ: ಸಾಮಾಜಿಕ ಪರಿಶೋಧನೆ ಕೇಂದ್ರ ಸರಕಾರದ ಒಂದು ವಿಭಿನ್ನ ಕಲ್ಪನೆಯಾಗಿದ್ದು, ಉಳಿದೆಲ್ಲ ಪರಿಶೋಧನೆಗಿಂತ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಸಾಮಾಜಿಕ ಪರಿಶೋಧನೆಯಿಂದ ಸಾಧ್ಯ. ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಸಾಧಿಸುವಲ್ಲಿ ಇದು ಅತ್ಯಂತ ಸಹಕಾರಿ ಎಂದು ತಾಲೂಕು ಪಂಚಾಯನ ಸಾಮಾಜಿಕ ಪರಿಶೋಧನೆಯ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ನುಡಿದರು.
ಅವರು ತಾಲ್ಲೂಕಿನ ಚಿತ್ತಾರ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಸಾಮಾಜಿಕ ಪರಿಶೋಧನಾ ಶಾಲಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸರಕಾರ ಉಳಿದ ಇಲಾಖೆಗಳಲ್ಲಿ ಮಾತ್ರ ಇದ್ದಂತ ಸಾಮಾಜಿಕ ಪರಿಶೋಧನೆ ಕಲ್ಪನೆಯನ್ನು ಶಿಕ್ಷಣ ಇಲಾಖೆಗೂ ಮುಂದುವರಿಸಿದ್ದು ಮಕ್ಕಳಿಗೆ ಗುಣಮಟ್ಟದ ಆಹಾರ ಸಿಗುವಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯದ ಆದೇಶದಂತೆ ಫೆಬ್ರುವರಿ ಹದಿನಾಲ್ಕರಿಂದ ಚಿತ್ತಾರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಊಟದ ಸಾಮಾಜಿಕ ಪರಿಶೋಧನೆ ನಡೆಸುತ್ತಿದ್ದು ಹೊನ್ನಾವರ ತಾಲ್ಲೂಕಿನ ಕಾರ್ಯಕ್ರಮ ವ್ಯವಸ್ಥಾಪಕ ಚಿದಾನಂದ ಗೌಡ ಹಾಗೂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಪಕರು ತಂಡದೊಂದಿಗೆ ಕೈಗೊಂಡ ಪ್ರತಿ ಹಂತಗಳ ವಿವರಗಳನ್ನು ಸಭೆಯಲ್ಲಿ ಎಳೆಎಳೆಯಾಗಿ ಬಿಡಿಸಿ ಹೇಳಿದರು. ಬಿಸಿಊಟದ ಅಡುಗೆ ಕೋಣೆಯ ಪರಿಶೀಲನೆ, ಊಟ ತಯಾರಿಕಾ ಹಂತ, ಬಡಿಸುವಲ್ಲಿನ ಸ್ವಚ್ಚತೆ ಊಟದ ರುಚಿ, ಮಕ್ಕಳ ಹಾಗೂ ಪಾಲಕರ ಅಭಿಪ್ರಾಯ ಸಂಗ್ರಹಣೆ ಪೂರ್ವಬಾವಿ ಸಭೆ ಈ ಎಲ್ಲ ವಿಷಯಗಳ ಕುರಿತು ಕಂಡುಕೊಂಡ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು. ಮಕ್ಕಳಿಗೆ ಚಿಕ್ಕಿ ಬಾಳೆಹಣ್ಣು ಹಾಗೂ ಮೊಟ್ಟೆಯನ್ನು ನೀಡಲು ಅವಕಾಶ ಇದ್ದು ಮಕ್ಕಳ ಬೇಡಿಕೆಗೆ ಹಾಗೂ ಅವರ ಇಚ್ಚೆಯಂತೆ ಯಾವುದಾದರೂ ಒಂದನ್ನೂ ನೀಡುವಂತೆ ತಿಳಿಸಿದರು. ಎಲ್ಲಿ ಶಿಕ್ಷಕರು ಪಾಲಕರು ಮಕ್ಕಳು ಮತ್ತು ಅಡುಗೆಯವರ  ಪರಸ್ಪರ ಹೊಂದಾಣಿಕೆ ವಿಶ್ವಾಸ ಇರುತ್ತದೆಯೋ ಅಲ್ಲಿ ಯಾವುದೇ ಲೋಪಗಳು ಕಂಡುಬರುವುದಿಲ್ಲ. ಈ ಸಕಾರಾತ್ಮಕ ಬದಲಾವಣೆ ಎಲ್ಲ ಶಾಲೆಗಳಲ್ಲೂ ಮುಂದಿನ ದಿನಗಳಲ್ಲಿ ಕಾಣುವಂತಾಗಬೇಕು ಎಂದರು.
ನಂತರ ಪಾಲಕರಿಗೆ ಅವರ ಅಭಿಪ್ರಾಯಗಳಿಗೆ  ಸಲಹೆ ಸೂಚನೆಗಳಿಗೆ ಮುಕ್ತ ಅವಕಾಶ ನೀಡಲಾಯಿತು. ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದ ಶಿಶು ಅಭಿವೃದ್ಧಿ ಇಲಾಖೆಯ ಮೆಲ್ವಿಚಾರಕಿ ಮಾಲತಿ ನಾಯ್ಕ ಮಾತನಾಡಿ ಸಾಮಾಜಿಕ ಪರಿಶೋಧನೆ ತಳಹಂತದಲ್ಲಿ ಸಮುದಾಯದೊಂದಿಗೆ ನಡೆಯುವ ಪ್ರಕ್ರಿಯೆ ಆದ ಕಾರಣ ಏನೇ ಲೋಪಗಳು ಕಂಡುಬಂದಲ್ಲಿ ಅದು ಇದರಿಂದ ಬೆಳಕಿಗೆ ಬರುವಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಅತಿಥಿಗಳನ್ನು ಪರಿಚಯಿಸಿದ ಶಾಲಾ ಮುಖ್ಯಶಿಕ್ಷಕಿ ರಾಧಾ ಪಟಗಾರ  ಮಾತನಾಡಿ ನಮ್ಮ ಶಾಲೆಯಲ್ಲಿ ಅನುಧಾನದ ಕೊರತೆ ಇದ್ದು ವಾರಕ್ಕೆ ಎರಡು ದಿನದ ಬದಲಾಗಿ ಒಂದೇ ದಿನ ಚಿಕ್ಕಿ ವಿತರಿಸುತ್ತಿದ್ದೇವೆ. ಮುಂದಿನ ದಿನದಲ್ಲಿ ಈ ಕೊರತೆ ನೀಗಿಸಲು ಸಹಾಯ ದೊರಕಬೇಕು ಎಂದರು. ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ದೀಪಕ ನಾಯ್ಕ, ಎಸ್‌ಡಿಎಂಸಿ ಉಪಾಧ್ಯಕ್ಷರು ಸದಸ್ಯರು ಹಾಜರಿದ್ದರು. ಸಹಶಿಕ್ಷಕಿ ವಂದಿಸಿದರು. ಶಾಲಾ ಮಕ್ಕಳು ಮೊದಲಿಗೆ ಪ್ರಾರ್ಥಿಸಿದರು. ಸಭೆಯಲ್ಲಿ ಶಿಕ್ಷಕರು ಹಾಗೂ 100ಕ್ಕೂ ಹೆಚ್ಚಿನ ಪಾಲಕರು ಅಡುಗೆ ತಯಾರಿಕಾ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top