• Slide
  Slide
  Slide
  previous arrow
  next arrow
 • ದಾಂಡೇಲಿಯ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

  300x250 AD

  ದಾಂಡೇಲಿ: ಮಾ.04ರಂದು ನಡೆಯಲಿರುವ ದಾಂಡೇಲಿ ತಾಲ್ಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನನದ ಲಾಂಛನವನ್ನು ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಬಿಡುಗಡೆಗೊಳಿಸಿದರು.
  ಬಳಿಕ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಮನಸ್ಸುಗಳ ಹಬ್ಬವಾಗಿದ್ದು, ಈ ಕಾರ‍್ಯಕ್ರಮವನ್ನು ಅವಿಸ್ಮರಣೀಯ ಮತ್ತು ಐತಿಹಾಸಿಕ ಕಾರ‍್ಯಕ್ರಮವನ್ನಾಗಿಸಲು ಸರ್ವರು ಸಹಕರಿಸಬೇಕೆಂದು ಕರೆ ನೀಡಿ, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ನಗರಸಭೆಯಿಂದ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು.
  ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ಪೌರಾಯುಕ್ತ ಆರ್.ಎಸ್.ಪವಾರ್ ಮಾತನಾಡಿ, ದಾಂಡೇಲಿ ತಾಲ್ಲೂಕಿನ ಚೊಚ್ಚಲ ಅಕ್ಷರ ಜಾತ್ರೆಯನ್ನು ವೈಭವದ ಜಾತ್ರೆಯನ್ನಾಗಿಸುವ ಮಹೋನ್ನತ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು, ಸುಂದರ ಮತ್ತು ಐತಿಹಾಸಿಕ ಕರ‍್ಯಕ್ರಮವನ್ನಾಗಿಸಲು ಸರ್ವರು ಒಂದಾಗಿ ಶ್ರಮಿಸಬೇಕೆಂದು ಕರೆ ನೀಡಿ, ಸಮ್ಮೇಳನದ ಯಶಸ್ಸಿಗೆ ನಗರಾಡಳಿತ ಮತ್ತು ತಾಲ್ಲೂಕಾಡಳಿತದಿಂದ ಸರ್ವ ಸಹಕಾರ ನೀಡುವುದಾಗಿ ಘೋಷಿಸಿದರು.
  ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ದಾಂಡೇಲಿ ತಾಲೂಕಾದ ನಂತರ ಇದೇ ಮೊದಲ ಬಾರಿಗೆ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇದು ನಮ್ಮ ತಾಲೂಕಿನ ಸರ್ವ ಜನತೆಯ ಹಬ್ಬವಾಗಲಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಲೇಖಕ, ವಿಮರ್ಶಕ, ಸಾಹಿತಿ ಮತ್ತು ವಿಶ್ರಾಂತ ಪ್ರಾಚಾರ್ಯರಾದ ಡಾ.ಆರ್.ಜಿ.ಹೆಗಡೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕನ್ನಡದ ರಥವನ್ನು ಅದ್ದೂರಿಯಾಗಿ ಮತ್ತು ಅಷ್ಟೇ ಶಿಸ್ತುಬದ್ಧವಾಗಿ ಎಳೆಯುವ ಕಾರ‍್ಯಕ್ಕೆ ಸರ್ವರು ಸಹಕರಿಸಬೇಕೆಂದು ಮನವಿ ಮಾಡಿದರು.
  ಪತ್ರಕರ್ತ ಯು.ಎಸ್.ಪಾಟೀಲ್ ಸಂದರ್ಭೋಚಿತವಾಗಿ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ ಸ್ವಾಗತಿಸಿದರು. ಗುರುಶಾಂತ ಜಡೆಹಿರೇಮಠ ವಂದಿಸಿದರು. ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್.ಆರ್.ನಾಯ್ಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
  ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರುಗಳಾದ ಮೋಹನ ಹಲವಾಯಿ, ದಶರಥ ಬಂಡಿವಡ್ಡರ್, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷರಾದ ಮುರ್ತುಜಾ ಆನೆಹೊಸೂರು, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ನಾಯಕ, ಪ್ರಮುಖರುಗಳಾದ ಕಲ್ಪನಾ ಪಾಟೀಲ್, ಸುರೇಶ್ ಕಾಮತ್, ಹನುಮಂತ ಕಾರ್ಗಿ, ನರೇಶ್ ನಾಯ್ಕ, ಶ್ರೀಮಂತ ಮದರಿ ಮೊದಲಾದವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top