ಶಿರಸಿ : ತಾಲೂಕಿನ ದಾಸನಕೊಪ್ಪ ರಂಗಾಪುರ ಹಾಗೂ ಬದನಗೋಡ ಗ್ರಾಮದ ಶ್ರೀ ಕಾನೇಶ್ವರಿ ದೇವಿಯ ಜಾತ್ರೆಯು ಫೆ.20 ದಿಂದ 22 ರವರೆಗೆ ನಡೆಯಲಿದೆ.
ಫೆ.20 ರಂದು ಬೆಳಿಗ್ಗೆ ಬ್ರಾಹ್ಮಿ ಮೂಹುರ್ತದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಲಿದೆ. 21 ರಂದು ಬೆಳಿಗ್ಗೆ 8ಕ್ಕೆ ಬಂಡಿ ಉತ್ಸವ ರಂಗಾಪುರ ಗ್ರಾಮದಿಂದ ಹೊರಡಲಿದ್ದು, ದೇವಿಯ ಸನ್ನಿಧಿಗೆ ಆಗಮಿಸಲಿದೆ. ನಂತರ ಪೂಜೆ ನಡೆಯಲಿದೆ. 22 ರಂದು ಪ್ರಸಾದ ವಿತರಣೆ, ಹಣ್ಣು – ಕಾಯಿ ಸಮರ್ಪಣೆ, ಶ್ರೀ ಕಲ್ಲೇಶ್ವರ ಸ್ವಾಮೀಜಿಗಳ ಸನ್ನಿಧಿಗೆ ಪೂಜಾರ್ಪಣೆ ನಂತರ ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಮೂರು ದಿನಗಳ ಕಾರ್ಯಕ್ರಮಕ್ಕೆ ಭಕ್ತಾದಿಗಳು ಬಂದು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.