Slide
Slide
Slide
previous arrow
next arrow

ಎಸ್‌ಡಿಎಂ ಕಾಲೇಜಿಗೆ ನ್ಯಾಕ್‌ನಿಂದ ‘A+’ ಮಾನ್ಯತೆ

300x250 AD

ಹೊನ್ನಾವರ: ಇಲ್ಲಿಯ ಎಂಪಿಇ ಸೊಸೈಟಿಯ ಎಸ್‌ಡಿಎಂ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್)ಯಿAದ ‘ಎ+’ ಮಾನ್ಯತೆ ಪಡೆದಿದೆ. ಪ್ರಸ್ತುತ ಉನ್ನತ ಶ್ರೇಣಿಯೊಂದಿಗೆ ‘ಎ+’ ಮಾನ್ಯತೆ ಪಡೆದ ಜಿಲ್ಲೆಯ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ಪೀರ್ ಟೀಮ್ ವರದಿ ಹಾಗೂ ಉಳಿದ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪರಿಶೀಲಿಸಿ 3.47 ಸಿಜಿಪಿಎ ಅಂಕಗಳೊAದಿಗೆ ‘ಎ+’ ಶ್ರೇಣಿಯ ಮಾನ್ಯತೆ ನೀಡಲಾಗಿದೆ. ಪ್ರಸ್ತುತ ಮಾನ್ಯತೆ 5 ವರ್ಷಗಳ ಅವಧಿಯದ್ದಾಗಿರುತ್ತದೆ ಎಂದು ನ್ಯಾಕ್ ಕಮಿಟಿ ಕಾಲೇಜಿಗೆ ಕಳಿಸಿರುವ ಪತ್ರದಲ್ಲಿ ತಿಳಿಸಿದೆ.
ಕಾಲೇಜು ಮೊದಲು ಮೂರು ಬಾರಿ ನ್ಯಾಕ್‌ನಿಂದ ಮೌಲ್ಯಮಾಪನಕ್ಕೆ ಒಳಗಾಗಿದ್ದು, ಪ್ರತಿ ಬಾರಿಯೂ ‘ಎ’ ಶ್ರೇಣಿಯ ಮಾನ್ಯತೆ ಪಡೆದಿತ್ತು. ಪ್ರಸ್ತುತ ಎ+ ಶ್ರೇಣಿಯ ಮಾನ್ಯತೆಯೊಂದಿಗೆ ಕಾಲೇಜು ತನ್ನ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೇರಿಸಿಕೊಂಡOತಾಗಿದೆ. ಕಾಲೇಜು ಎ+ ಮಾನ್ಯತೆ ಪಡೆಯಲು ಕಾರಣರಾದ ಆಡಳಿತ ಮಂಡಳಿ, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಹಾಗೂ ಪೂರ್ವ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ ಎಂದು ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top