ಶಿರಸಿ: ಶಿರಸಿ ತಾಲೂಕಿನ 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕವಿ ರಾಜೀವ ಅಜ್ಜೀಬಳರವರ ಮನೆಗೆ ಮಂಗಳವಾರ ಶಿರಸಿ ಕಸಾಪ ಪದಾಧಿಕಾರಿಗಳು, ಸದಸ್ಯರು ತೆರಳಿ ಸನ್ಮಾನಿಸಿ ಆಮಂತ್ರಣ ಪತ್ರಿಕೆಯನ್ನು ನೀಡಿ, ಸಮ್ಮೇಳನಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕಸಾಪ ಶಿರಸಿ ತಾಲೂಕಾ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಗೌರವ ಕೋಶಾಧ್ಯಕ್ಷ ವಿ.ಆರ್. ಹೆಗಡೆ ಮತ್ತಿಘಟ್ಟ, ಕಾರ್ಯಕಾರಣಿ ಸದಸ್ಯರಾದ ಪ್ರೊ. ಕೆ. ಎನ್.ಹೊಸಮನಿ, ರಾಜೇಶ ದೇಶಭಾಗ, ಕೃಷ್ಣ ಪದಕಿ, ಸಾವಿತ್ರಿ ಶಾಸ್ತ್ರಿ, ಸಾಹಿತಿ ಡಿ.ಎಂ. ಭಟ್ಟ ಕುಳವೆ ಉಪಸ್ಥಿತರಿದ್ದರು.
ತಾಲೂಕಾ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಿಗೆ ಆಮಂತ್ರಣ ನೀಡಿದ ಪದಾಧಿಕಾರಿಗಳು
