• Slide
  Slide
  Slide
  previous arrow
  next arrow
 • ಬನ್ನಿ ಮಂಟಪ ಪ್ರಕರಣ: ಶಾಸಕರ ವಿರುದ್ಧ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಾಗ್ದಾಳಿ

  300x250 AD

  ಹಳಿಯಾಳ: ಶಾಸಕ ಆರ್.ವಿ.ದೇಶಪಾಂಡೆಯವರು ತಮ್ಮದೇ ಪಕ್ಷದ ಪುರಸಭೆಯ ಅಧ್ಯಕ್ಷನಿಗೆ ಕರೆದು ಬುದ್ಧಿ ಹೇಳುವುದನ್ನ ಬಿಟ್ಟು ಬನ್ನಿ ಮಂಟಪದ ಪ್ರಕರಣಕ್ಕೆ ಕೋಮು ಗಲಭೆಯ ಬಣ್ಣ ಬಳಿಯಲು ಪ್ರಯತ್ನಿಸಿರುವುದು ನಿಜಕ್ಕೂ ಖಂಡನಾರ್ಹ ಎಂದು ಗ್ರಾಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ ಕಿಡಿಕಾರಿದರು.
  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಶಾಸಕರು ಗಂಭೀರವಾಗುವವರೆಗೆ ಸುಮ್ಮನಿದ್ದು ಜಾಣ ಕಿವುಡತನ ಪ್ರದರ್ಶಿಸಿದ್ದಾರೆ. ಹಳಿಯಾಳ ಬಂದ್ ಆಕಸ್ಮಿಕವಲ್ಲ, ಅದಕ್ಕೂ ಪೂರ್ವ ಬಂದ್‌ಗೆ ಸಂಬಂಧಿಸಿದ ವಿಷಯವನ್ನು ಜವಾಬ್ದಾರಿಯುತ ಎಲ್ಲ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬನ್ನಿ ಮಂಟಪದ ಬಳಿಯ ಕಾಮಗಾರಿ ತಕ್ಷಣ ನಿಲ್ಲಿಸಬೇಕೆಂದು ಕೂಡ ಪದೇ ಪದೇ ವಿನಂತಿ ಮಾಡಲಾಗಿದ್ದರೂ ಪುರಸಭೆ ಅಧ್ಯಕ್ಷ ಬಸರಿಕಟ್ಟಿ ತರಾತುರಿಯಲ್ಲಿ ಕಾಮಗಾರಿ ನಡೆಸಿದ್ದನ್ನು ವಿರೋಧಿಸಲಾಗಿದೆ ಹೊರತು ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇರಲಿಲ್ಲ ಎಂದಿದ್ದಾರೆ.
  ಯಾರ ಮನವಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದೆ ಚುನಾವಣೆಯ ಹೊಸ್ತಿಲಲ್ಲಿ ಸಮಾಜದ ಸಾಮರಸ್ಯ, ಪ್ರೀತಿ ಬಾಂಧವ್ಯ ಹಾಳುಗೆಡವಿ ಒಡಕನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದು ಪುರಸಭೆ ಅಧ್ಯಕ್ಷರು ಹೊರತು ಗ್ರಾಮದೇವಿ ಟ್ರಸ್ಟ್ ಅಥವಾ ಅಂದು ಪ್ರತಿಭಟನೆಯಲ್ಲಿ ಸೇರಿದ್ದ ಯಾರೊಬ್ಬರು ಅಲ್ಲ. ಹಿಂದೂಗಳು ತಮ್ಮ ಧರ್ಮದ ಪ್ರತೀಕವಾಗಿ ಬಳಸುವ ಕೇಸರಿ ಭಗವಾ ಧ್ವಜವನ್ನು ತಮ್ಮ ಇರುವಿಕೆಯ ಕುರುಹುವಿಗಾಗಿ ಬನ್ನಿ ಮಂಟಪದ ಬಳಿ ಸ್ಥಾಪಿಸಿದ್ದಾರೆಯೇ ಹೊರತು ಬೇರೆ ಯಾವುದೇ ರಾಜಕೀಯವಿಲ್ಲ. ಆದರೆ ಶಾಸಕರಿಗೆ ಭಗವಾ ಧ್ವಜ ಯಾವುದೆಂದು ತಿಳಿಯದೇ ಇರುವುದು ದುಃಖದ ಸಂಗತಿ ಎಂದಿದ್ದಾರೆ.
  ಪತ್ರಿಕಾಗೋಷ್ಠಿಯಲ್ಲಿ ಗ್ರಾಮದೇವಿ ದೇವಸ್ಥಾನ ಟ್ರಸ್ಟ್ನ ಸದಸ್ಯರಾದ ಯಲ್ಲಾರಿ ಬೊಬಾಟಿ, ಪಕ್ಕಿರಪ್ಪ ಕಂಚನಾಳಕರ, ಸುರೇಶ ದೇಸಾಯಿ, ಶಿವಾನಂದ ಶೆಟ್ಟರ್, ನಂದಕಿಶೋರ ಬೊಂಗಾಳೆ, ಚೂಡಪ್ಪ ಬೋಬಾಟಿ, ತುಕಾರಾಮ ಪಟ್ಟೆಕಾರ ಇದ್ದರು. 

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top