• Slide
    Slide
    Slide
    previous arrow
    next arrow
  • ‘ಅಂಕೋಲಾ ಉತ್ಸವ- 2023’ : ಅಮ್ಮೆಂಬಳ ಆನಂದಗೆ ‘ಸತ್ಯಾಗ್ರಹ’ ಪ್ರಶಸ್ತಿ

    300x250 AD

    ಅಂಕೋಲಾ: ‘ಅಂಕೋಲಾ ಉತ್ಸವ- 2023’ ಸಮಿತಿಯು ಕವಿ- ಕರ್ಮಯೋಗಿ ಡಾ.ದಿನಕರ ದೇಸಾಯಿ ಅವರ ಒಡನಾಡಿ ಹಾಗೂ ಹಿರಿಯ ಪತ್ರಕರ್ತರು ಮತ್ತು ಪರಿಸರವಾದಿ ಅಮ್ಮೆಂಬಳ ಆನಂದ ಅವರಿಗೆ ಪ್ರಸಕ್ತ ಸಾಲಿನ ‘ಸತ್ಯಾಗ್ರಹ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.
    ಸಂಗಾತಿ ರಂಗಭೂಮಿ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕದ ಬಾರ್ಡೋಲಿ ‘ಅಂಕೋಲಾ ಉತ್ಸವ’ 5ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಿದೆ. 7 ದಿನಗಳ ಕಾಲ ನಡೆಯುತ್ತಿರುವ ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ಫೆಬ್ರುವರಿ 15 ರಂದು ಜೈಹಿಂದ್ ಮೈದಾನದಲ್ಲಿ ರಾತ್ರಿ 8.00 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದು 3ನೇ ವರ್ಷದ ಪ್ರಶಸ್ತಿಯಾಗಿದ್ದು, ಆಯ್ಕೆ ಸಮಿತಿಯಲ್ಲಿ ಖ್ಯಾತ ಕತೆಗಾರರು ಡಾ. ರಾಮಕೃಷ್ಣ ಗುಂದಿ, ಹಿರಿಯ ಸಾಹಿತಿಗಳಾದ ಸುಬ್ರಾಯ್ಯ ಮತ್ತಿಹಳ್ಳಿ ಹಾಗೂ ಡಾ. ಶ್ರೀಧರ ಬಳಗಾರ ಅವರು ಈ ಆಯ್ಕೆಯನ್ನು ಪ್ರಕಟಿಸಿದ್ದಾರೆ.
    ಅಮ್ಮೆಂಬಳ ಆನಂದ ಅವರು 5 ದಶಕಕ್ಕೂ ಹೆಚ್ಚು ಕಾಲ ಅಂಕೋಲೆಯಲ್ಲಿ ನೆಲೆಸಿ, ಜನಸೇವಕ ಪತ್ರಿಕೆಯ ಸಂಪಾದಕರು, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಸಂಯುಕ್ತ ಕರ್ನಾಟಕ, ಉದಯವಾಣಿ, ಕನ್ನಡಪ್ರಭ ಹೀಗೆ ಹಲವು ದಿನಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ರೈತ ಜನಾಂದೋಲನ, ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ, ಮದ್ಯಪಾನಿ ವಿರೋಧಿ ಆಂದೋಲನದ ನೇತಾರರಾಗಿ ಹೀಗೆ ಅನೇಕ ಹೋರಾಟಗಳಲ್ಲಿ ತಮ್ಮನ್ನು ಮುಂಚೂಣಿಯಾಗಿ ತೊಡಗಿಸಿಕೊಂಡಿದ್ದರು. ಹಾಲಿ ಅವರು ಮಣಿಪಾಲದಲ್ಲಿ ನೆಲೆಸಿದ್ದಾರೆ.
    ಅವರ ಈ ಎಲ್ಲ ಕಾರ್ಯಗಳನ್ನು ಪರಿಗಣಿಸಿ ಮತ್ತು ಹಿರಿಯರು ಆದ ಅವರನ್ನು ಸ್ವಾತಂತ್ರ್ಯ ಹೋರಾಟದ ನೆಲವಾಗಿರುವ ಅಂಕೋಲೆಯ ಹೋರಾಟದ ನೆನಪಿಗಾಗಿ ಪ್ರತಿವರ್ಷ ಅಂಕೋಲಾ ಉತ್ಸವದ ಸಂದರ್ಭದಲ್ಲಿ ಒಬ್ಬರಿಗೆ ಮಾತ್ರ ನೀಡುವ ಸತ್ಯಾಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಅಮ್ಮೆಂಬಳ ಆನಂದ ಅವರನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಅಂಕೋಲಾ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ರೂಪಾಲಿ ನಾಯ್ಕ ಮತ್ತು ಪ್ರಶಸ್ತಿಯ ಸಂಸ್ಥಾಪಕರಾದ ಕೆ.ರಮೇಶ ಅವರು ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top