Slide
Slide
Slide
previous arrow
next arrow

ಮನೆಯಲ್ಲಿ ಅವಿತುಕೊಂಡಿದ್ದ ಜೋಡಿ ನಾಗರಹಾವು ವಾಪಾಸ್ ಕಾಡಿಗೆ

300x250 AD

ಕಾರವಾರ: ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಅವಿತುಕೊಂಡಿದ್ದ ಜೋಡಿ ನಾಗರ ಹಾವನ್ನ ಕೊನೆಗೂ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ.

ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ರಾಮು ಎನ್ನುವವರ ಮನೆಯಲ್ಲಿ ಹದಿನೈದು ದಿನಗಳಿಂದ ಎರಡು ಹಾವುಗಳು ಅವಿತುಕೊಂಡಿದ್ದು, ಸೆರೆ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಸತತವಾಗಿ 4 ಗಂಟೆಗಳ ಕಾರ್ಯಾಚರಣೆ ನಡೆಸಿ ಜೋಡಿ ನಾಗರ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಒಂದು ನಾಗರಹಾವು ಸುಮಾರು 6.6 ಅಡಿ ಗಾತ್ರದ್ದಾಗಿದ್ದು ವಿಶೇಷವಾಗಿತ್ತು. 5 ರಿಂದ 5.5 ಅಡಿ ಗಾತ್ರದ ನಾಗರಹಾವುಗಳು ಈ ಭಾಗದಲ್ಲಿ ಕಾಣಸಿಗುವುದು ಸಾಮಾನ್ಯ. ಆದರೆ 6.6 ಅಡಿ ಗಾತ್ರದ ನಾಗರ ಸಿಕ್ಕಿದ್ದು ಬಹಳ ಅಪರೂಪವಾಗಿದೆ. ಉಪವಲಯ ಅರಣ್ಯ ಅಧಿಕಾರಿಮಧುಕುಮಾರ್ ಡಿ.ಎಚ್., ಉಪವಲಯ ಅರಣ್ಯಾಧಿಕಾರಿ ಆನಂದ್ ಬಜರಂಗ್ ಮತ್ತು ಅರಣ್ಯ ರಕ್ಷಕ ಅಬ್ದುಲ್ ಅವರ ಸಹಕಾರದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ.

300x250 AD

ಪಶ್ಚಿಮಘಟ್ಟ ಪ್ರದೇಶದಲ್ಲಿ 4ರಿಂದ 5.5 ಅಡಿ ಗಾತ್ರದ ನಾಗರಹಾವುಗಳು ಸಾಮಾನ್ಯವಾಗಿ ದಾಖಲಾಗಿರುತ್ತವೆ. ಆದರೆ ಸುಮಾರು ಆರು ಅಡಿಗಿಂತ ಹೆಚ್ಚಿನ ಗಾತ್ರದ ನಾಗರಹಾವು ವಿರಳ ಎಂದು ಹೇಳಬಹುದು. ಬಯಲು ಸೀಮೆಯಲ್ಲಿ 6ರಿಂದ 6.5 ಅಡಿಯವರೆಗಿನ ಉದ್ದದ ನಾಗರ ಹಾವುಗಳು ಸಾಮಾನ್ಯ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ. ಹೇಳಿದ್ದಾರೆ.

Share This
300x250 AD
300x250 AD
300x250 AD
Back to top