Slide
Slide
Slide
previous arrow
next arrow

ಪಂಚರತ್ನ ರಥಯಾತ್ರೆ ಯಶಸ್ವಿ: ಬದಲಾವಣೆಗೆ ಜನರ ಬೆಂಬಲ: ಸೂರಜ ನಾಯ್ಕ

300x250 AD

ಕುಮಟಾ: ಹೊನ್ನಾವರ- ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಸುಮಾರು 40 ಸಾವಿರಕ್ಕೂ ಅಧಿಕ ಜನರು ಈ ರಥಯಾತ್ರೆಯನ್ನು ವೀಕ್ಷಿಸುವ ಮೂಲಕ ಈ ಕ್ಷೇತ್ರದಲ್ಲಿ ಬದಲಾವಣೆ ತರಲು ಬೆಂಬಲಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸೂರಜ ನಾಯ್ಕ ಸೋನಿ ತಿಳಿಸಿದರು.

ಪಟ್ಟಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.8ರಂದು ಗೋಕರ್ಣದಿಂದ ಆರಂಭವಾದ ಪಂಚರತ್ನ ರಥಯಾತ್ರೆಗೆ ಜನರಿಂದ ಅತ್ಯುತ್ತಮ ಸ್ಪಂದನೆ ದೊರೆತ್ತಿದೆ. ಆರಂಭದಲ್ಲೆ ಶ್ರೀಕ್ಷೇತ್ರ ಗೋಕರ್ಣದಲ್ಲಿ ನೆಲೆಸಿರುವ ಶ್ರೀ ಮಹಾಗಣಪತಿ ಗರಿಕೆಹೂವಿನ ಪ್ರಸಾದ ನೀಡುವ ಮೂಲಕ ನಮ್ಮನ್ನು ಹರಸಿದ. ಹಾಗಾಗಿ ಈ ಕ್ಷೇತ್ರದಲ್ಲಿ ಸಂಚರಿಸಿದ ಎಲ್ಲ ಸ್ಥಳಗಳಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ನೀಡುವ ಜೊತೆಗೆ ಸಾವಿರಾರು ಜನರು ಪಾಲ್ಗೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಆರಂಭದಲ್ಲೆ ನನ್ನನ್ನು ಈ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಅಭ್ಯರ್ಥಿ ಘೋಷಣೆಯ ವಿಚಾರದಲ್ಲಿ ಇಲ್ಲಸಲ್ಲದ ವದಂತಿ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದಾರೆ. ಇನ್ನು ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿ ಅವರು ನೀಡಿದ ವಸತಿ ಆಸರೆ, ಆರೋಗ್ಯ ಸಂಪತ್ತು, ಆಧುನಿಕ ಶಿಕ್ಷಣ, ರೈತ ಚೈತನ್ಯ, ಯುವಕರಿಗೆ ಉದ್ಯೋಗ ಮತ್ತು ಮಹಿಳಾ ಸಬಲೀಕರಣ ಯೋಜನೆಯನ್ನು ಅವರು ಸಿಎಂ ಆದರೆ ಖಂಡಿತ ಈಡೇರಿಸುತ್ತಾರೆ. ಅಲ್ಲದೇ ಈ ಕ್ಷೇತ್ರದಲ್ಲಿನ ತೆಂಗು, ಅಡಿಕೆ, ಬಾಳೆ, ಈರುಳ್ಳಿ, ತರಕಾರಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಕೃಷಿಗೆ ಉತ್ತೇಜನ ನೀಡುತ್ತಾರೆ. ಮಹಿಳಾ ಸ್ವಸಹಾಯ ಸಂಘಗಳ ಔದ್ಯೋಗಿನ ಸಾಲವನ್ನು ಕೂಡ ಮನ್ನಾ ಮಾಡುತ್ತಾರೆಂದು ತಿಳಿಸಿದ್ದಾರೆ.

ಅವರು ನುಡಿದಂತೆ ನಡೆಯುವ ಜನ ನಾಯಕನಾಗಿದ್ದು, ಅವರು ಸಿಎಂ ಆದರೆ ಖಂಡಿತ ಈ ಎಲ್ಲ ಬೇಡಿಕೆಯನ್ನು ಈಡೇರಿಸುತ್ತಾರೆ. ಅಲ್ಲದೇ ಈ ಕ್ಷೇತ್ರದ ಜನರು ನನಗೂ ಕೂಡ ಬೆಂಬಲ ನೀಡುವ ಮೂಲಕ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಬೇಕು. ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಬೇಕು. ಕುಮಾರಸ್ವಾಮಿ ಅವರು ಇಟ್ಟ ವಿಶ್ವಾಸವನ್ನು ನೀವೆಲ್ಲರೂ ಉಳಿಸಿಕೊಳ್ಳನ್ನು ಈ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. ಅಲ್ಲದೇ ಈ ಪಂಚರತ್ನ ರಥಯಾತ್ರೆ ಯಶಸ್ವಿಯಾಗಲು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ನನ್ನ ಸ್ನೇಹಿತರ ಬಳಗವು ಸಾಕಷ್ಟು ಕೆಲಸ ಮಾಡಿದೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವ ಮೂಲಕ ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಾಯ, ಸಹಕಾರ ನಿಮ್ಮಿಂದ ನನಗೆ ಸಿಗುವಂತಾಗಬೇಕೆಂದು ವಿನಂತಿಸಿದರು.

300x250 AD

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ, ಪ್ರಮುಖರಾದ ದತ್ತು ಪಟಗಾರ, ಸತೀಶ ಮಹಾಲೆ, ಅಬ್ದುಲ್ ದಂಕಾರ್, ಎಂ.ಟಿ.ನಾಯ್ಕ ಕಾಗಲ್, ಯಶವಂತ ಗೌಡ, ಉದಯ ನಾಯ್ಕ, ಮಂಜು ಜೈನ್ ಇತರರು ಇದ್ದರು.

Share This
300x250 AD
300x250 AD
300x250 AD
Back to top