• Slide
    Slide
    Slide
    previous arrow
    next arrow
  • ರಾಜ್ಯಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿ: KCL ಕಾನಗೋಡ್ ಚಾಂಪಿಯನ್

    300x250 AD

    ಅಂಕೋಲಾ: ತಾಲೂಕಿನ ಹಳವಳ್ಳಿಯಲ್ಲಿ ದಿ. ಭಾಸ್ಕರ ಭಟ್ಟ ಸ್ಮರಣಾರ್ಥ ರಾಜ್ಯ ಮಟ್ಟದ ಹವ್ಯಕ ಸಮಾಜದ ಹವ್ಯಕ ಅಂಡರ್ ಆರ್ಮ್ ಪಂದ್ಯಾವಳಿಯನ್ನು ಶಾಸಕಿ ರೂಪಾಲಿ ನಾಯ್ಕ ಪ್ರಾಯೋಜಕತ್ವದಲ್ಲಿ ಹವ್ಯಕ ಕ್ರಿಕೆಟ್ ಅಸೋಸಿಯೇಷನ್ ಹಳವಳ್ಳಿಯ ಆಯೋಜನೆಯಲ್ಲಿ ಜರುಗಿತು.
    ಪಂದ್ಯಾವಳಿಯನ್ನು ಹಿರಿಯ ಕ್ರೀಡಾಪಟು,ಬ್ರಾಹ್ಮಣ ಮಹಾಸಭಾ ಜಿಲ್ಲಾ ಸದಸ್ಯ ಗೋಪಾಲಕೃಷ್ಣ ವೈದ್ಯ ಉದ್ಘಾಟಿಸಿ ಮಾತನಾಡಿ, ಭಾಸ್ಕರ ಭಟ್ಟರು ಎಲ್ಲಾ ರಂಗದಲ್ಲು ಆಸಕ್ತಿ ಹೊಂದಿದವರಾಗಿದ್ದು, ಕ್ರೀಡೆ ಅಂದರೆ ಅವರಿಗೆ ಅಚ್ಚುಮೆಚ್ಚು. ಕ್ರಿಕೆಟಿನಲ್ಲಿ ಉತ್ತಮ ಆಟಗಾರರಾಗಿದ್ದರು.

    ಹಳವಳ್ಳಿಯಲ್ಲಿ ಮೊದಲಿನಿಂದಲೂ ಸಂಘಟನಾ ಶಕ್ತಿ ಇದೆ. ಯುವ ಮಿತ್ರರು ಮತ್ತೊಮ್ಮೆ ಅದನ್ನು ಸಾಬೀತು ಪಡಿಸಲು ಶಾಸಕರ ಸಹಕಾರದಿಂದ ಸಾಧ್ಯವಾಯಿತು ಎಂದರು.

    ಹವ್ಯಕ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಬಿ. ಭಟ್ಟ ಶೆವ್ಕಾರ್ ಮಾತನಾಡಿ ಹವ್ಯಕ ಸಮಾಜದ ಯುವಕರ ಪ್ರಯತ್ನ ಹಳವಳ್ಳಿ ಊರವರ ಸಹಕಾರದಿಂದ ಇಂತಹ ಕುಗ್ರಾಮದಲ್ಲೂ ಇಂತಹ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಿದ್ದು ಸಾಹಸವೇ ಸರಿ ಎಂದರು. ಎಸ್. ಡಿ. ಎಂ.ಸಿ ಅಧ್ಯಕ್ಷ ದಿನಕರ ಹೆಬ್ಬಾರ್ ಮಾತನಾಡಿದರು.ಯುವಕ ಮಂಡಲದ ಅಧ್ಯಕ್ಷರಾದ‌‌ ವಿಶ್ವನಾಥ ಹೆಬ್ಬಾರ್, ಗ್ರಾ,ಪಂ ಡೋಂಗ್ರಿ ಉಪಾಧ್ಯಕ್ಷ ಪುಟ್ಟು ಕನಕನಹಳ್ಳಿ, ಸದಸ್ಯರಾದ ನಿತ್ಯಾನಂದ ಭಟ್ಟ ಹಳವಳ್ಳಿ, ರೇಣುಕಾ ಸಿದ್ದಿ, ಹವ್ಯಕ ಟ್ರಸ್ಟ್ ಅಧ್ಯಕ್ಷ ಸದಾನಂದ ಭಟ್ಟ, ಯುವ ಮುಖಂಡ ಕ್ರೀಡಾ ಪ್ರೋತ್ಸಾಹಕರಾದ ನಾರಾಯಣ ಹೆಗಡೆ, ನಾಗರಾಜ ಹೆಗಡೆ ಕೊಡ್ಲಗದ್ದೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಾನಂಗಳದಲ್ಲಿ ಪಟಾಕಿಗಳ ಚಿತ್ತಾರವು ಎಲ್ಲರ ಗಮನ ಸೆಳೆಯಿತು.

    300x250 AD

    ಕೆಸಿಎಲ್ ಕಾನಗೋಡ್ ಚಾಂಪಿಯನ್:
    ಸಂಜೆ 5 ಗಂಟೆಯಿಂದ ಪ್ರಾರಂಭವಾದ ಪಂದ್ಯಾವಳಿಯಲ್ಲಿ ವಿವಿಧ ಭಾಗಗಳಿಂದ 16 ಹವ್ಯಕ ತಂಡಗಳು ಭಾಗವಹಿಸಿದ್ದವು. ರೋಚಕ ಫೈನಲ್ ಪಂದ್ಯದಲ್ಲಿ ಆತಿಥೇಯ ಟೀಮ್ ಕೆಸಿಎಲ್ ಕಾನಗೋಡು ಹಳವಳ್ಳಿ ತಂಡವನ್ನು 2 ರನ್ ಗಳಿಂದ ಮಣಿಸಿ ವಿಜಯಶಾಲಿಯಾಗಿ ಹೊರ ಹೊಮ್ಮಿತು. ಕೆಸಿಎಲ್ ತಂಡದ ಮಹೇಶ ಹೆಗಡೆ ಸರಣಿ ಶ್ರೇಷ್ಟ, ಅದೇ ತಂಡದ ಗುರುಪ್ರಸಾದ ಭಟ್ ಉತ್ತಮ ದಾಂಡಿಗನಾಗಿಯೂ, ಹಳವಳ್ಳಿ ತಂಡದ ವಿನಯ್ ಹೆಬ್ಬಾರ್ ಉತ್ತಮ ಎಸೆತಗಾರನಾಗಿಯೂ, ಹರ್ಷಮಾಣಿ ಉತ್ತಮ ಕ್ಷೇತ್ರ ರಕ್ಷಕರಾಗಿ ಹೊರಹೊಮ್ಮಿದರು.
    ಹಿರಿಯ ಸಾಮಾಜಿಕ ಕಾರ್ಯಕರ್ತರಾದ ನಾರಾಯಣ ಹೆಬ್ಬಾರ್,ಕ್ರೀಡಾ ಪ್ರೋತ್ಸಾಹಕರಾದ ಎಸ್. ಎಂ. ಹೆಗಡೆ ಹಳವಳ್ಳಿ, ದಾಮೋದರ್ ಹೆಬ್ಬಾರ್ ,ನಿತ್ಯಾನಂದ ಭಟ್ಟ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು..
    ಪಂದ್ಯಾವಳಿಯ ಸಂಪೂರ್ಣ ಪ್ರಾಯೋಜಕತ್ವವನ್ನು ರೂಪಾಲಿ ನಾಯ್ಕ ಹಾಗೂ ಅವರ ಸುಪುತ್ರ ಪರ್ಭತ್ ನಾಯ್ಕ ವಹಿಸಿಕೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top