Slide
Slide
Slide
previous arrow
next arrow

ಟೆಂಪೋ ಪಲ್ಟಿ; ಕ್ಲೀನರ್ ಸ್ಥಳದಲ್ಲೇ ಸಾವು

300x250 AD

ಹೊನ್ನಾವರ: ತಾಲೂಕಿನ ಮಾಗೋಡ್ ತೆಂಗಾರ ಸಮೀಪ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕ್ಲೀನರ್ ಸ್ಥಳದಲ್ಲೆ ಮೃತಪಟ್ಟ ಘಟನೆ ಸಂಭವಿಸಿದೆ.

ಹಿರೇಗುತ್ತಿಯಿಂದ ಸಂಶಿಗೆ ನಿಶ್ಚಿತಾರ್ಥ ಕಾರ್ಯ ಮುಗಿಸಿ ವಾಪಸ್ಸು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟೆಂಪೊ ಕ್ಲೀನರ ಆಗಿದ್ದ ಹಳದೀಪುರ ಬಡ್ನಕೇರಿಯ ಮಂಜುನಾಥ ಮುಕ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಾಹನದಲ್ಲಿದ್ದ 20ಕ್ಕೂ ಅಧಿಕ ಜನರಿಗೆ ಚಿಕ್ಕಪುಟ್ಟ ಗಾಯವಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸ್ಥಳಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

300x250 AD

Share This
300x250 AD
300x250 AD
300x250 AD
Back to top