• Slide
    Slide
    Slide
    previous arrow
    next arrow
  • ಭತ್ತದ ತೆನೆ ತೋರಣ ಉಡುಗೊರೆ ಪಡೆದ ಎಚ್.ಡಿ.ಕುಮಾರಸ್ವಾಮಿ

    300x250 AD

    ಹೊನ್ನಾವರ: ಪಂಚರತ್ನ ಯಾತ್ರೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕಾಸರಕೋಡ ಅಪ್ಸರಕೊಂಡದ ಬಳಿ ಅಭಿಮಾನಿಗಳು, ರಿಕ್ಷಾ ಚಾಲಕರು ಗ್ರಾಮ ಒಕ್ಕಲಿಗ ಸಮಾಜದ ಮಹಿಳೆಯರ ಪರಂಪರಾಗತ ಕುಶಲ ನೇಯ್ಗೆಯ ಭತ್ತದ ತೆನೆಯ ಹಾರವನ್ನು ಅರ್ಪಿಸಿದ್ದಾರೆ.

    ಶುಭಲಾಭಕರ ಎಂದು ರೈತರು ಭತ್ತದ ಕೊಯ್ಲು ಮಾಡುವಾಗ ಕೆಲವು ತೆನೆಗಳನ್ನು ಆಯ್ದು ತಂದು ಅವುಗಳನ್ನು ತೋರಣದ ರೀತಿಯಲ್ಲಿ ನೇಯ್ದು ಬಾಗಿಲಿಗೆ ಕಟ್ಟುತ್ತಿದ್ದರು. ಈ ಸಾಂಪ್ರದಾಯಿಕ ಕಲೆಗೆ ಇತ್ತೀಚೆ ವಾಣಿಜ್ಯ ರೂಪ ಬಂದಿದ್ದು ಪಂಚತಾರಾ ಸಂಸ್ಕೃತಿಕ ಹೊಟೆಲ್ ಮತ್ತು ಶ್ರೀಮಂತರ ಮನೆಗಳಿಗೂ ಇವುಗಳನ್ನು ಕಟ್ಟಲಾಗುತ್ತದೆ. ಅಪ್ಸರಕೊಂಡ ಭಾಗದ ಕೆಲವು ಮಹಿಳೆಯರು ಉಪಕಸುಬಾಗಿ ಈ ವೃತ್ತಿಯನ್ನು ಕಾಯ್ದುಕೊಂಡಿದ್ದಾರೆ.

    300x250 AD

    ಇದರ ಆಕರ್ಷಣೆ ಕಂಡು ವ್ಯಾಪಾರಿಗಳೂ ಸಹ ಬೇರೆ ಊರಿಂದ ಭತ್ತದ ತೆನೆಗಳನ್ನು ತಂದು ಇವುಗಳನ್ನು ಒಯ್ದು ನಗರಗಳಲ್ಲಿ ಮಾರಾಟ ಮಾಡುತ್ತಾರೆ. ಕುಮಾರಸ್ವಾಮಿಯವರು ಈ ತೋರಣವನ್ನು ಮೆಚ್ಚಿಕೊಂಡು ಇದನ್ನು ತಯಾರಿಸಿದ ಮಾದೇವಿ ರಾಮ ಗೌಡ ಇವರನ್ನು ಅಭಿನಂದಿಸಿದ್ದಾರೆ. ಯಾವುದೇ ರೀತಿಯ ನೂಲನ್ನು ಬಳಸದೆ ತೆನೆಯ ಉದ್ದ ಬುಡವನ್ನೇ ಬಳಸಿಕೊಂಡು ಈ ತೋರಣವನ್ನು ನೇಯ್ಯಲಾಗುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top