ಹೊನ್ನಾವರ: ಲೋಕ್ ಅದಾಲತ್‌ನಲ್ಲಿ ತಾಲೂಕಿನ 3 ನ್ಯಾಯಾಲಯಗಳ ಒಟ್ಟೂ 193 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.
ಹೊನ್ನಾವರ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ 1 ಸಿವಿಲ್ ಪ್ರಕರಣ ಹಾಗೂ 19 ಅಮಲ್ಜಾರಿ ಪ್ರಕರಣ, 4 ಐ.ಪಿ.ಸಿ ಪ್ರಕರಣ, 31 ಚೆಕ್ ಬೌನ್ಸ್ ಪ್ರಕರಣ. 2 ಖಾಸಗಿ ದೂರು, 2 ಜೀವನಾಂಶ ಪ್ರಕರಣ, ಎಮ್.ವಿ.ಎಕ್ಟ್ ಮತ್ತು ಕೆ.ಪಿ.ಎಕ್ಟ್ ಸೇರಿ 64 ಪ್ರಕರಣಗಳು ಸೇರಿದಂತೆ ಒಟ್ಟೂ 123 ಪ್ರಕರಣಗಳು ರಾಜಿ ಮೂಲಕ ತೀರ್ಮಾನಗೊಂಡವು.
ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಮ.ಎಫ್,.ಸಿ ನ್ಯಾಯಾಲಯದಲ್ಲಿ 3 ಸಿವಿಲ್ ಪ್ರಕರಣಗಳು, 15 ಅಮಲ್ಜಾರಿ ಪ್ರಕರಣಗಳು, 34 ಚೆಕ್ ಬೌನ್ಸ್ ಪ್ರಕರಣಗಳು, ಎಮ್.ವಿ.ಎಕ್ಟ್ ಮತ್ತು ಕೆ.ಪಿ.ಎಕ್ಟ್ 7 ಪ್ರಕರಣಗಳು ಸೇರಿದಂತೆ 59 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.
ಹಿರಿಯ ಸಿವಿಲ್ ಮತ್ತು ಎಮ್.ಎ.ಸಿ.ಟಿ ನ್ಯಾಯಾಲಯದಲ್ಲಿ 8 ಮೋಟಾರ್ ವಾಹನ ಅಪಘಾತ ವಿಮಾ ಪರಿಹಾರ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡು ರೂ. 21,85,000ಗಳನ್ನು ನೊಂದವರಿಗೆ ನೀಡಲು ತೀರ್ಮಾನಿಸಲಾಯಿತು. 3 ಅಮಲ್ಜಾರಿ ಪ್ರಕರಣದಲ್ಲಿ ರೂ. 14,76,285 ಹಣ ವಸೂಲಿಗೆ ತೀರ್ಮಾನಿಸಲಾಯಿತು.
ನ್ಯಾಯಾಧೀಶರಾದ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶ ಕುಮಾರ ಜಿ., ಸಂದಾನಕಾರರಾಗಿ ನ್ಯಾಯವಾದಿ ಸೂರಜ್ ನಾಯ್ಕ ಮತ್ತು ಪ್ರಿನ್ಸಿಪಲ್ ಸಿವಿಲ್ ಕೋರ್ಟಿನ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹಾಗೂ ಸಂಧಾನಕಾರರಾಗಿ ವಕೀಲ ಕೇಶವ ಭಟ್ ಕರಡಗಾರ, ಸರಕಾರಿ ಅಭಿಯೋಜಕಿ ಸಂಪದಾ ಗುನಗಾ, ಪೂರ್ಣಿಮಾ ನಾಯ್ಕ ಭಟ್ಕಳ ಹಾಗೂ ವಕೀಲರು, ಕಕ್ಷಿದಾರರು ಲೋಕ್ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಕ್ಕೆ ಸಹಕರಿಸಿದರು.