Slide
Slide
Slide
previous arrow
next arrow

ನಗೆ ಗ್ರಾಮದಲ್ಲಿ ಮಹಾದೇವ ದೇವರ ಜಾತ್ರೆ ಸಂಪನ್ನ

300x250 AD

ಕಾರವಾರ: ತಾಲೂಕಿನ ನಗೆ ಗ್ರಾಮ ಮಹಾದೇವ ದೇವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ದೇವರ ಪಲ್ಲಕ್ಕಿ ಗ್ರಾಮದಲ್ಲಿ ಸಂಚರಿಸಿ ಭಕ್ತಾದಿಗಳಿಗೆ ದರ್ಶನ ನೀಡಿತು. ಪಲ್ಲಕ್ಕಿ ಉತ್ಸವದ ನಂತರದಲ್ಲಿ ದೇವಸ್ಥಾನದ ಸಭಾಭವನದಲ್ಲಿ ಯಕ್ಷಗಾನವನ್ನು ಏರ್ಪಡಿಸಲಾಗಿತ್ತು. ದೂರ ದೂರದಿಂದ ಭಕ್ತಾದಿಗಳು ದೇವರ ದರ್ಶನದ ಜೊತೆಯಲ್ಲಿ ಗ್ರಾಮದ ಕಲೆಯನ್ನು ಸವಿಯಲು ಅವಕಾಶವಾಯಿತು. ಗ್ರಾಮದ ಯುವಕರು, ಹಿರಿಯರು, ಸಾರ್ವಜನಿಕರು ಮತ್ತು ಶಾಲೆಯ ವಿದ್ಯಾರ್ಥಿಗಳು ದೇವರ ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ಬಗೆಯ ಪ್ರಾಣಿಗಳ ಸ್ತಬ್ದ ಗೊಂಬೆಗಳನ್ನು ತಯಾರಿಸಿದ್ದು ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಯಿತು.

300x250 AD

ಸ್ತಬ್ದ ಗೊಂಬೆಗಳು ಅತ್ಯಂತ ಆಕರ್ಷಣೀಯವಾಗಿದ್ದು, ಸೂರಜ್ ನಾಗಾ ಗೌಡ, ನವೀನ ಲಕ್ಷ್ಮಣ ಗೌಡ, ಲೇಖಾ ರಾಮಾ ಗೌಡ, ಸಾಗರ ಶಂಕರ ಗೌಡ, ವಿಶ್ವನಾಥ ರಮೇಶ ಗೌಡ, ಗೌರೀಶ ಶಿವಾ ಗೌಡ ಇವರ ತಂಡಗಳು ಹಾಗೂ ಗ್ರಾಮಸ್ಥರು ಸೇರಿ ವಿವಿಧ ಪ್ರಾಣಿಗಳ ವಿನ್ಯಾಸಗಳು ಜನಮನ ಸೂರೆಗೊಂಡವು. ಶಾಲಾ ಪುಟಾಣಿ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳನ್ನು ಧರಿಸಿದ್ದರು. ಈ ಜಾತ್ರೆಯು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಹಾಲಕ್ಕಿ ಸಮಾಜದ ಪ್ರತಿಭೆಗಳನ್ನು ಹೊರಹೊಮ್ಮಿಸಲು ಸಹಾಯಕವಾಗಿದೆ. ಇವರನ್ನು ಸ್ಥಳೀಯ ಶಾಲೆಯ ಮುಖ್ಯಾಧ್ಯಾಪಕ ಅಖ್ತರ್ ಸೈಯದ್, ಅರಣ್ಯ ಇಲಾಖೆಯ ಲಾಲ್‌ಸಾಬ್ ಹಾಗೂ ತಂಡದವರು ಮತ್ತು ಊರಿನ ಹಿರಿಯರು ಅಭಿನಂದಿಸಿದರು.

Share This
300x250 AD
300x250 AD
300x250 AD
Back to top