• Slide
  Slide
  Slide
  previous arrow
  next arrow
 • ಒಗ್ಗಟ್ಟಾಗಿ ಸಂಘಟಿಸುವ ಕಾರ್ಯಕ್ರಮದ ಸಂತಸ ಅನುಭವಿಸುವುದೇ ಹೆಮ್ಮೆ: ಗಜಾನನ ಗುನಗಾ

  300x250 AD

  ಕುಮಟಾ: ಊರಿನಲ್ಲಿ ನಡೆಯುವ ಕಾರ್ಯಕ್ರಮಗಳು ಆ ಊರಿನ ಯುವಕರ ಸಂಘಟನಾ ಸಾಮರ್ಥ್ಯ ತಿಳಿಯಲು ಸಹಾಯಕಾರಿಯಾಗುತ್ತದೆ ಎಂದು ಬಿಜೆಪಿ ಮುಖಂಡ ಗಜಾನನ ಗುನಗಾ ಹೇಳಿದರು.
  ತಾಲೂಕಿನ ಹಳಕಾರ ಗ್ರಾಮದಲ್ಲಿ ನಾರಾಯಣ ಅಭಿಮಾನಿ ಬಳಗದಿಂದ ನಡೆದ ಸಾರ್ಥಕ ಸೇವೆಗೆ ಅಭಿಮಾನದ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮ ಮಾಡುವುದು ಸುಲಭದ ಮಾತಲ್ಲ. ಎಲ್ಲರೂ ಒಗ್ಗಟ್ಟಾಗಿ ಸಂಘಟಿಸುವ ಕಾರ್ಯಕ್ರಮದ ಸಂತಸವನ್ನು ಅನುಭವಿಸುವುದೇ ಹೆಮ್ಮೆಯ ಸಂಗತಿ ಎಂದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಮತ್ತು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಊರಿನಲ್ಲಿ ಇಂಥ ಕಾರ್ಯಕ್ರಮ ನೋಡಿ ನಮಗೆಲ್ಲಾ ಸಂತೋಷವಾಗಿದೆ. ನಾರಾಯಣ ಗುನಗಾ ಅವರ ವ್ಯಕ್ತಿತ್ವ ಈ ಕಾರ್ಯಕ್ರಮದ ಮೂಲಕ ಪರಿಚಯವಾಯಿತು ಎಂದರು.
  ಈ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ, ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತರಿಗೆ ಮತ್ತು ಬೆಳ್ಳಿ ಮತ್ತು ಚಿನ್ನದ ಪದಕ ಪುರಸ್ಕೃತ ಕೆ ಎಸ್ ಆರ್ ಟಿ ಸಿ ಚಾಲಕನನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿಕುಮಾರ.ಎಂ.ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ನಿಲಯ ಪಾಲಕರಾದ ಶ್ರೀಕಾಂತ್ ಜಿ.ಗುನಗಾ, ಉಪನ್ಯಾಸಕರಾದ ಶಂಕರ.ಎನ್.ಪಟಗಾರ, ಬಾಡಾ ಗ್ರಾ.ಪಂ.ಸದಸ್ಯರಾದ ದತ್ತಾತ್ರೇಯ ಪಟಗಾರ, ವಕೀಲ ಸೀತಾರಾಮಾ ಜಿ.ಗುನಗಾ, ಉದ್ಯಮಿ ನಾಗಪ್ಪ.ಜೆ.ಗೌಡ, ಹೊಲನಗದ್ದೆ ಗ್ರಾಂ.ಪಂ.ಉಪಾಧ್ಯಕ್ಷೆ ಮಾದೇವಿ.ಆರ್.ಮುಕ್ರಿ, ಗ್ರಾಂ.ಪಂ.ಸದಸ್ಯರಾದ ಸಾವಿತ್ರಿ ಎನ್.ಪಟಗಾರ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಕೆಕ್ಕಾರ ರಾಜೇಶ ಗುನಗಾ ತಂಡದಿಂದ ನಡೆದ ನಾಟಕ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top