• Slide
  Slide
  Slide
  previous arrow
  next arrow
 • ಅದ್ದೂರಿ ಬಿಣಗಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

  300x250 AD

  ಕಾರವಾರ: ಸ.ಮಾ.ಹಿ. ಪ್ರಾ. ಶಾಲೆ ಬಿಣಗಾದಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಫೆ. 7ರಂದು ಅತ್ಯಂತ ಆಕರ್ಷಕವಾಗಿ ಕಲಿಕಾ ಹಬ್ಬದ ನೊಡೆಲ್ ಅಧಿಕಾರಿ ಶ್ರೀಮತಿ ರಾಜಮ್ಮ ನಾಯಕ ನೇತೃತ್ವದಲ್ಲಿ ನಡೆಯಿತು.
  ವಿದ್ಯಾರ್ಥಿಗಳನ್ನು ಮೆರವಣಿಗೆಯ ಮೂಲಕ ಕುಂಭಮೇಳ, ಕೋಲಾಟ, ಗುಮಟೆ  ವಾದನ, ವಿವಿಧ ವೇಷಭೂಷಣದೊಂದಿಗೆ ಕಲಿಕಾ ಹಬ್ಬದ ಹಾಡುಗಳನ್ನು ಹಾಡುತ್ತಾ ಪಾಲಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಊರ ನಾಗರಿಕರು, ಶಿಕ್ಷಕರು ವೇದಿಕೆಗೆ ಕರೆತಂದು ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಟೋಪಿ ಧರಿಸಿ ಸ್ವಾಗತಿಸಿದರು. ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ಅತಿಥಿ ಸ್ಥಾನವನ್ನು ಅಲಂಕರಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಂತಸಪಟ್ಟರು.
  ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರಾದ (ಅಭಿವೃದ್ಧಿ) ಎನ್.ಜಿ. ನಾಯಕ ಮಾತನಾಡಿ ಇದೊಂದು ಅರ್ಥಪೂರ್ಣವಾದ ಮಾದರಿ ಕಾರ್ಯಕ್ರಮವಾಗಿ ಕಲಿಕಾ ಹಬ್ಬ ಹೊರಹೊಮ್ಮಿದೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ನಗರಸಭೆಯ ಉಪಾಧ್ಯಕ್ಷರಾದ ಪ್ರಕಾಶ ಪಿ. ನಾಯ್ಕ ಮಾತನಾಡಿ ಇಂತಹ ಮಕ್ಕಳ ಕಾರ್ಯಕ್ರಮವನ್ನು ನೋಡುವುದೇ ನಮಗೊಂದು ಹಬ್ಬವಾಗಿದೆ ಎಂದರು. ಜಿಲ್ಲಾ ಉಪಸಮನ್ವಯಾಧಿಕಾರಿಗಳಾದ ಲತಾ ನಾಯಕರವರು ಮಾತನಾಡಿ ಉತ್ತಮವಾಗಿ ಕಾರ್ಯಕ್ರಮವನ್ನು ಸಂಘಟಿಸಿ ಯಶಸ್ವಿಗೊಳಿಸಿದ್ದಾರೆಂದು ನುಡಿದರು. ಹಿರಿಯ ಉಪನ್ಯಾಸಕರಾದ ನಾಗರಾಜ ಗೌಡ, ನಗರಸಭೆ ಸದಸ್ಯರಾದ ರುಕ್ಮಿಣಿ ಗೌಡ, ಊರ ಗಣ್ಯರಾದ ಅರವಿಂದ ತೆಂಡೂಲಕರ, ಚುಟುಕು ಕವಿ ಜಿ.ಡಿ. ಪಾಲೇಕರ, ಕಾರವಾರ ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪಿ. ಗೌಡ, ಜಿಲ್ಲಾ ಸಂಘದ ಪ್ರತಿನಿಧಿ ಸುಚೇತಾ ಕೊಡಕಣಿ, ಸಿ.ಆರ್.ಪಿ. ಅಶೋಕ ಗಾಂವಕರ, ಕಾರ್ಯಕ್ರಮವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಉಪಸ್ಥಿತರಿದ್ದ ಎಲ್ಲ ಗಣ್ಯರು ಕಾರ್ಯಕ್ರಮದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಯಕ್ಷಗಾನದ ಹಾಡಿಗೆ ನೃತ್ಯ ಮಾಡಿದರು.
  ಕಲಿಕಾ ಹಬ್ಬದ ಉದ್ಘಾಟನಾ ಸಮಾರಂಭವು ವಿದ್ಯಾರ್ಥಿಗಳ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾಯಿತು. ಶಾಲಾ ಮುಖ್ಯಾಧ್ಯಾಪಕ ಕೃಷ್ಣಾನಂದ ಇಡೂರಕರ ಸ್ವಾಗತಿಸಿದರು. ನೊಡೆಲ್ ಅಧಿಕಾರಿ ರಾಜಮ್ಮ ನಾಯಕ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿಆರ್‌ಪಿ ಅಶೋಕ ಗಾಂವಕರ ವಂದಿಸಿದರು. ಆರ್.ಪಿ. ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಹರಿಕಾಂತ, ಜ್ಯೋತಿ ಗುನಗಿ, ಲತಾ ನಾಯ್ಕ, ವಿಜಯಲಕ್ಷ್ಮಿ ನಾಯಕ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಶಿಕ್ಷಕರಾದ ಪುಷ್ಪಾಬಾಯಿ ಗಾಂವಕರ, ಸಂಧ್ಯಾ ಇಡೂರಕರ, ಸುಜಾತಾ ಸುಂಕದನವರ ಕಾರ್ಯಕ್ರಮದ ಸಂಘಟನೆಗೆ ಸಹಕರಿಸಿದರು. ಶಾಲೆಯ ಎಸ್.ಡಿಎಮ್‌ಸಿ, ಊರ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top