• Slide
    Slide
    Slide
    previous arrow
    next arrow
  • ಜಾಗತಿಕ ಹೂಡಿಕೆದಾರರ ಶೃಂಗಸಭೆ- 2023: ಪ್ರಧಾನಿ ಮೋದಿ ಚಾಲನೆ

    300x250 AD

    ಉತ್ತರ ಪ್ರದೇಶ :ಪ್ರಧಾನಿ ನರೇಂದ್ರ ಮೋದಿ ಅವರು ಫೆ.10ರಂದು ಲಕ್ನೋದಲ್ಲಿ ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ನ್ನು ಉದ್ಘಾಟಿಸಲಿದ್ದಾರೆ.

    ಯುಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಫೆಬ್ರವರಿ 10- 12 ರ ನಡುವೆ ಮೂರು ದಿನಗಳ ಕಾಲ ನಡೆಯಲಿದ್ದು, ಇದು ಉತ್ತರ ಪ್ರದೇಶ ಸರ್ಕಾರದ ಪ್ರಮುಖ ಹೂಡಿಕೆ ಶೃಂಗಸಭೆಯಾಗಿದೆ. ವ್ಯಾಪಾರದ ಅವಕಾಶಗಳನ್ನು ಒಟ್ಟಾಗಿ ಅನ್ವೇಷಿಸಲು ಮತ್ತು ಪಾಲುದಾರಿಕೆಗಳನ್ನು ರೂಪಿಸಲು ವಿಶ್ವದಾದ್ಯಂತದ ನೀತಿ ನಿರೂಪಕರು, ಉದ್ಯಮದ ನಾಯಕರು, ಶಿಕ್ಷಣ ತಜ್ಞರು, ಚಿಂತಕರು ಮತ್ತು ನಾಯಕರನ್ನು ಒಟ್ಟುಗೂಡಿಸುವ ಗುರಿಯನ್ನು ಈ ಮೆಗಾ ಈವೆಂಟ್ ಹೊಂದಿದೆ.

    ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ವಿದೇಶ ಮತ್ತು ದೇಶದ ಕೈಗಾರಿಕೋದ್ಯಮಿಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

    300x250 AD

    ಶೃಂಗಸಭೆಯ ಅವಧಿಯಲ್ಲಿ, ಒಟ್ಟು 34 ಸೆಷನ್‌ಗಳು ಇರುತ್ತಿದ್ದು, ಇವುಗಳಲ್ಲಿ 10 ಸೆಷನ್‌ಗಳು ಮೊದಲ ದಿನ, 13 ಎರಡನೇ ದಿನ ಮತ್ತು 11 ಕೊನೆಯ ದಿನ ಇರಲಿದೆ.

    ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ್ ಗುಪ್ತಾ ನಂದಿ ಹಾಗೂ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ಕೆ ಚಂದ್ರಶೇಖರನ್, ಕುಮಾರ್ ಮಂಗಳಂ ಬಿರ್ಲಾ ಮತ್ತು ಆನಂದ್ ಮಹೀಂದ್ರ ಅವರು ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top