Slide
Slide
Slide
previous arrow
next arrow

ಭೂಕಂಪ ಪೀಡಿತ ಟರ್ಕಿಯ ರಕ್ಷಣೆಗೆ ಧಾವಿಸಿದ ಭಾರತದ ಶ್ವಾನದಳ

300x250 AD

ನವದೆಹಲಿ: ಜೂಲಿ, ರೊಮಿಯೊ, ಹನಿ ಮತ್ತು ರಾಂಬೊ ನಾಲ್ಕು ಸದಸ್ಯರ ಶ್ವಾನದಳ ಭೂಕಂಪ ಪೀಡಿತ ಟರ್ಕಿಯಲ್ಲಿ ರಕ್ಷಣಾ ಅಖಾಡಕ್ಕಿಳಿದಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 101 ಸದಸ್ಯರ ಸಹೋದ್ಯೋಗಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ನಿಫಿಂಗ್ ಮತ್ತು ಇತರ ಪ್ರಮುಖ ಕೌಶಲ್ಯಗಳಲ್ಲಿ ವಿಶೇಷ ತರಬೇತಿ ಪಡೆದ ಲ್ಯಾಬ್ರಡಾರ್ ತಳಿಯ ಶ್ವಾನದಳವು ಮಂಗಳವಾರ ಭಾರತದಿಂದ NDRF ನ ಎರಡು ಪ್ರತ್ಯೇಕ ತಂಡಗಳೊಂದಿಗೆ ಟರ್ಕಿಗೆ ತೆರಳಿದೆ.

ಸೋಮವಾರ ಭಾರೀ ಭೂಕಂಪಗಳಿಂದ ಧ್ವಂಸಗೊಂಡ ಟರ್ಕಿಯ ಪೀಡಿತ ಪ್ರದೇಶಗಳಲ್ಲಿ ಶ್ವಾನದಳವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದೆ. ಭಾರತದ ರಕ್ಷಣಾ ತಂಡ ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ವಿಶೇಷ ತರಬೇತಿ ಪಡೆದ ಶ್ವಾನದಳ ಮತ್ತು ಅಗತ್ಯವಿರುವ ಎಲ್ಲಾ ಉಪಕರಣಗಳೊಂದಿಗೆ NDRF ನ 101 ಸಿಬ್ಬಂದಿಗಳನ್ನು ಒಳಗೊಂಡ ಎರಡು ತಂಡಗಳನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳ ಮೂಲಕ ಟರ್ಕಿಗೆ ಕಳುಹಿಸಲಾಯಿತು.

300x250 AD

ಎನ್‌ಡಿಆರ್‌ಎಫ್‌ನ ತುಕಡಿಯನ್ನು ಕಮಾಂಡೆಂಟ್ ಗುರ್ಮಿಂದರ್ ಸಿಂಗ್ ನೇತೃತ್ವದಲ್ಲಿ ವೈದ್ಯರು ಮತ್ತು ಅರೆವೈದ್ಯರು ಅಗತ್ಯ ನೆರವು ನೀಡುತ್ತಿದ್ದಾರೆ.

Share This
300x250 AD
300x250 AD
300x250 AD
Back to top