Slide
Slide
Slide
previous arrow
next arrow

ಕಲಾರಸಿಕರ ಮನಸೂರೆಗೊಂಡ ‘ನಾದಾರಾಧನೆ’

300x250 AD

ಅಂಕೋಲಾ: ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ಹಳವಳ್ಳಿ ಇವರ ಆಶ್ರಯದಲ್ಲಿಹಳವಳ್ಳಿಯ ಸಾಧನಾ ರೈತ ಸಭಾಭವನದಲ್ಲಿ ನಡೆದ ಸಂಗೀತ ನಾಧಾರಾಧಾನೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಹಳವಳ್ಳಿಯ ಸಮಾನ ಮನಸ್ಕ ಕಲಾಪ್ರೇಮಿಗಳ ತಂಡವು ಪ್ರಥಮ ವರ್ಷದ ನಾಧಾರಾಧನೆಯನ್ನು ಹಮ್ಮಿಕೊಂಡಿತ್ತು.
ಊರಿನ ಹಿರಿಯರಾದ ವಿಶ್ವೇಶ್ವರ ಹೆಗಡೆ ಮಾವಿನಕೇರಿಮಠ ದ್ವೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯ ಗೌರವಾಧ್ಯಕ್ಷರಾದ ಎಂ.ಎನ್. ಹೆಗಡೆ ಹಳವಳ್ಳಿ ಹಾಗೂ ಅಧ್ಯಕ್ಷರಾದ ಡಾ.ಎಂ.ಎಂ. ಹೆಗಡೆಯವರು ಮಾತನಾಡಿ ಶುಭ ಹಾರೈಸಿದರು.
ಮನ ತಣಿಸಿದ ನಾದಾರಾಧನೆ:
ಕುಮಾರಿ ಅನಘಾ ಭಟ್ಟ ಹಾಗೂ ಕುಮಾರಿ ಹರ್ಷಿತಾ ಭಟ್ ಗಾಯನದಿಂದ ನಾದಾರಾಧನೆ ಪ್ರಾರಂಭವಾಯಿತು.ನಂತರದಲ್ಲಿ ಶಿವರಾಮ ಭಾಗ್ವತ್ ಕನಕನಹಳ್ಳಿ ಇವರ ಮೆಲೊಡಿಕಾ ವಾದನ ಹಾಗೂ ಭಾರ್ಗವ್ ರಾವ್ ಬೆಂಗಳೂರು ಕೊಳಲು ವಾದನವನ್ನು ಪ್ರಸ್ತುತ ಪಡಿಸಿದರು. ಪ್ರಸನ್ನ ವೈದ್ಯ ಹಾಗೂ ಗೋಪಾಲಕೃಷ್ಣ ಭಾಗ್ವತರ ಗಾಯನ ಸಂಗೀತ ಪ್ರೇಕ್ಷಕರನ್ನು ನಾದ ಲಹರಿಯಲ್ಲಿ ತೇಲುವಂತೆ ಮಾಡಿತ್ತು.ಇವರುಗಳಿಗೆ ನಾಗಪತಿ ಹೆಗಡೆ ,ಪ್ರದೀಪ್ ಕೋಟೆಮನೆ ,ಶ್ರೀಶ ವೈದ್ಯ ತಬಲಾದಲ್ಲಿ ಹಾಗೂ ಪ್ರಕಾಶ್ ಹೆಗಡೆ ಇವರು ಹಾರ್ಮೋನಿಯಂ ಸಾಥಿನಲ್ಲಿ ಸಹಕರಿಸಿದರು.
ಗಣೇಶ ಭಟ್ಟ ಸಂಪೂರ್ಣ ಕಾರ್ಯಕ್ರಮವನ್ನು‌ ನಿರೂಪಿಸಿದರು.

300x250 AD

Share This
300x250 AD
300x250 AD
300x250 AD
Back to top