Slide
Slide
Slide
previous arrow
next arrow

ಅಧಿಕಾರಿಗಳ ನಡೆಯ ಮೇಲೆ ಕಣ್ಣಿಡಲು ಅಕ್ರಮ ಮರಳು ಸಾಗಾಟಗಾರರಿಂದ ಗುಪ್ತದಳ ರಚನೆ

300x250 AD

ಕುಮಟಾ: ಜಿಲ್ಲೆಯಲ್ಲಿ ಮರಳು ನಿಷೇಧದ ನಡುವೆಯೇ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ಸಾಗಿದೆ. ಇನ್ನು ಅಕ್ರಮವಾಗಿ ಮರಳು ತೆಗೆಯುವವರ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎನ್ನುವ ಭಯದಿಂದ ಅಕ್ರಮ ನಡೆಸುವವರು ಅಧಿಕಾರಿಗಳ ಓಟಾಟದ ಮೇಲೆ ನಿಗಾ ಇಡಲು ಗುಪ್ತ ತಂಡವನ್ನ ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಮರಳು ತೆಗೆಯಲು ಅವಕಾಶ ಮಾಡಿಕೊಡಲಾಗಿತ್ತು. ಕಾಳಿ, ಗಂಗಾವಳಿ, ಅಘನಾಶಿನಿ, ಶರವಾತಿ ನದಿಯಲ್ಲಿ ಸುಮಾರು 100ಕ್ಕೂ ಅಧಿಕ ಲೀಸ್ ದಾರರು ಮರಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದರು. ಆದರೆ ಸಿ.ಆರ್.ಜೆಡ್ ಪ್ರದೇಶದಲ್ಲಿ ಮರಳು ತೆಗೆಯಬಾರದು ಎಂದು ನಿಷೇಧ ಹೇರಿದ್ದರಿಂದ ಜಿಲ್ಲೆಯಲ್ಲಿ ಮರಳು ಅಭಾವ ಎದುರಾಗಿದೆ. ಇನ್ನು ಒಂದು ಕಡೆ ಜನರು ಮನೆ ನಿರ್ಮಾಣಕ್ಕೆ ಮರಳಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಸರ್ಕಾರಿ ಕಾಮಗಾರಿಗಳಿಗೂ ಮರಳಿಲ್ಲ. ಇದಲ್ಲದೇ ಜಿಲ್ಲೆಯಲ್ಲಿ ಎಂ ಸ್ಯಾಂಡ್ ಕೊರತೆ ಸಹ ಇದ್ದು ಇದನ್ನ ಲಾಭ ಮಾಡಿಕೊಂಡಿರುವ ಕೆಲವರು ಅಕ್ರಮವಾರಿ ಮರಳನ್ನ ತೆಗೆದು ಸಾಗಾಟ ಮಾಡುವ ಜಾಲದಲ್ಲಿ ಬಿದ್ದಿದ್ದು ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕಿನಲ್ಲೂ ಅಕ್ರಮ ಮರಳುಗಾರಿಕೆಯೇ ಮರಳ ಸಾಗಾಟ ನಡೆಯುತ್ತಿದೆ.
ಅಕ್ರಮವಾಗಿ ಮರಳನ್ನ ತೆಗೆಯುವವರು ಸ್ಥಳೀಯವಾಗಿ ಅಧಿಕಾರಿಗಳು ತಮ್ಮ ಮೇಲೆ ದಾಳಿ ನಡೆಸದಂತೆ ಎಚ್ಚರಿಕೆಯನ್ನ ವಹಿಸಿದ್ದಾರೆ. ಕೆಲವೆಡೆ ಸ್ಥಳೀಯ ಅಧಿಕಾರಿಗಳ ಕೃಪಾಕಟಾಕ್ಷದಿಂದಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇನ್ನು ಜಿಲ್ಲಾ ಕೇಂದ್ರ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಾರೆನ್ನುವ ಭಯಕ್ಕೆ ಅಕ್ರಮ ದಂದೆಕೋರರು ಗುಪ್ತ ತಂಡವನ್ನೇ ಕಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಕಾರವಾರದಿಂದ ಗಣಿ ಇಲಾಖೆ ಅಧಿಕಾರಿಗಳು ಹೊರಟ ತಕ್ಷಣ ಮಾಹಿತಿ ಹಂಚಿಕೆ ಪ್ರಾರಂಭವಾಗುತ್ತದೆ ಎನ್ನಲಾಗಿದೆ. ಗುಪ್ತ ತಂಡದವರು ಹೆದ್ದಾರಿಗಳಲ್ಲಿ ತಮ್ಮದೇ ಆದ ಜನರನ್ನ ನೇಮಿಸಿಕೊಂಡಿದ್ದು ಅಧಿಕಾರಿಗಳ ವಾಹನ ಎಲ್ಲೆಲ್ಲಿ ಓಡಾಡುತ್ತದೆ ಎನ್ನುವ ಮಾಹಿತಿಯನ್ನ ಎಲ್ಲಿರಿಗೂ ತಿಳಿಸುತ್ತಾರೆ. ಅಧಿಕಾರಿಗಳು ಯಾವ ತಾಲೂಕಿನ ಕಡೆ ಹೋಗುತ್ತಾರೆ ಅಲ್ಲಿ ಅಕ್ರಮ ಮರಳು ತೆಗೆಯುವವರಿಗೆ ಮಾಹಿತಿ ನೀಡಿ ತಮ್ಮ ವಾಹನ ಓಡಾಟವನ್ನ ನಿಲ್ಲಿಸುತ್ತಾರೆ.
ಇದು ಕೇವಲ ಮರಳು ಮಾತ್ರವಲ್ಲದೇ ಈ ಹಿಂದೆ ಅಕ್ರಮವಾಗಿ ಕಲ್ಲು ಸಾಗಾಟ ಮಾಡುವವರು ಈ ಗುಪ್ತ ತಂಡದ ಮೂಲಕವೇ ತಮ್ಮ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಮಾಹಿತಿ ಕೊಡಲು ನೇಮಿಕವಾದ ಗುಪ್ತ ತಂಡದ ಸದಸ್ಯರಿಗೆ ತಿಂಗಳಿಗೆ ಇಂತಿಷ್ಟು ಎಂದು ಹಣವನ್ನ ಸಹ ನೀಡುತ್ತಾರೆ ಎನ್ನಲಾಗಿದ್ದು ಈ ವಿಚಾರ ಇದೀಗ ಸಾಕಷ್ಟು ಚರ್ಚೆಗೆ ಸಹ ಕಾರಣವಾಗಿದೆ.


ಖಾಸಗಿ ವಾಹನದಲ್ಲಿ ದಾಳಿಗೆ ಮುಂದಾದ ಅಧಿಕಾರಿ
ಸರ್ಕಾರಿ ವಾಹನದಲ್ಲಿ ಹೋಗಿ ದಾಳಿ ಮಾಡಿದರೆ ಎಲ್ಲೆಲ್ಲಿ ಹೋಗುತ್ತೇವೆ ಎಂದು ಮಾಹಿತಿ ಈ ಗುಪ್ತ ತಂಡದಿಂದ ಸೋರಿಕೆ ಆಗುತ್ತದೆ ಎಂದು ಅಧಿಕಾರಿಯೊಬ್ಬರು ಇತ್ತಿಚೆಗೆ ಖಾಸಗಿ ವಾಹನವನ್ನು ಮಾಡಿಕೊಂಡು ಹೊರಟಿದ್ದರಂತೆ. ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿಗೆ ತೆರಳಿದ ಅಧಿಕಾರಿ ಮೂರ್ನಾಲ್ಕು ವಾಹನವನ್ನ ಸಹ ವಶಕ್ಕೆ ಪಡೆದುಕೊಂಡಿದ್ದರು ಎನ್ನಲಾಗಿದೆ. ಕೆಲ ದಿನಗಳಿಂದ ಮಾಹಿತಿ ಸೋರಿಕೆ ಮಾಡುವ ಗುಪ್ತ ತಂಡವನ್ನ ಕಣ್ತಪ್ಪಿಸಲು ಖಾಸಗಿ ವಾಹನದಲ್ಲಿಯೇ ತೆರಳಿ ದಾಳಿ ನಡೆಸುತ್ತಿದ್ದು ಇದೀಗ ಅಧಿಕಾರಿ ನಡೆಯಿಂದ ಅಕ್ರಮ ಮರಳು ತೆಗೆಯುವವರಿಗೆ ದೊಡ್ಡ ತಲೆ ನೋವಾಗಿದೆ.

300x250 AD

ಸರ್ಕಾರ ಬೇಗ ಅನುಮತಿ ಕೊಡಲಿ
ಸರ್ಕಾರ ಮರಳು ತೆಗೆಯುವನ್ನ ಬಂದ್ ಮಾಡಿದ್ದರಿಂದ ಅನಿವಾರ್ಯವಾಗಿ ಅಕ್ರಮವಾಗಿ ಮರಳು ತೆಗೆಯಲಾಗಿದೆ. ಸರ್ಕಾರ ಅನುಮತಿ ಕೊಟ್ಟರೇ ಈ ಅಕ್ರಮ ದಂದೆ ಬಂದ್ ಆಗಲಿದೆ ಎನ್ನುವುದು ಕೆಲವರ ಅಭಿಪ್ರಾಯ. ಜಿಲ್ಲೆಯಲ್ಲಿ ಮನೆ ನಿರ್ಮಾಣ ಸರ್ಕಾರಿ ಕಾಮಗಾರಿಗಳು ಮರಳಿಲ್ಲದೇ, ಇತ್ತ ಎಂ ಸ್ಯಾಂಡ್ ಸಹ ಇಲ್ಲದೇ ಪರದಾಟ ನಡೆಸುತ್ತಿದ್ದಾರೆ. ಸರ್ಕಾರ ಸಿ.ಆರ್.ಜೆಡ್ ಅಲ್ಲದ ಪ್ರದೇಶದಲ್ಲಿ ಮರಳು ತೆಗೆಯಲು ಬೇಗ ಅನುಮತಿ ನೀಡಿದರೆ ಜನರ ಸಮಸ್ಯೆ ಸಹ ಬಂದ್ ಆಗಲಿದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.

Share This
300x250 AD
300x250 AD
300x250 AD
Back to top