Slide
Slide
Slide
previous arrow
next arrow

ಶ್ರೀಕ್ಷೇತ್ರ ದೇವಿಮನೆಯಲ್ಲಿ ಮಹಾರಥೋತ್ಸವ ಸಂಪನ್ನ

300x250 AD

ಭಟ್ಕಳ: ಕಿತ್ರೆಯ ಶ್ರೀಕ್ಷೇತ್ರ ದೇವಿಮನೆಯ ಶ್ರೀದುರ್ಗಾಪರಮೇಶ್ವರಿ ದೇವಿಯ ಮಹಾರಥೋತ್ಸವ ವಿಜ್ರಂಭಣೆಯಿoದ ಸಂಪನ್ನಗೊoಡಿತು.
ರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ತಾಂತ್ರಿಕರಾದ ಗೋಕರ್ಣದ ಅಮೃತೇಶ್ವರ ಭಟ್ಟ ಇವರ ಆಚಾರ್ಯತ್ವದಲ್ಲಿ ಬೆಳಿಗ್ಗೆಯಿಂದಲೇ ಗಣೇಶ ಪೂಜೆ, ಪುಣ್ಯಾಹ, ದುರ್ಗಾಹವನ, ರುದ್ರಹವನ, ರಥ ಸಂಪ್ರೋಕ್ಷಣೆ, ಕಲಾಶಾಭಿಷೇಕ, ಪೂರ್ಣಾಹುತಿ, ಶ್ರೀ ದೇವರ ರಥಾರೋಹಣ, ತೀರ್ಥಪ್ರಸಾದ ವಿತರಣೆ ನಡೆಯಿತು. ರಾಘವೇಶ್ವರ ಭಾರತೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಲಂಬೋಧರ ಭಟ್ಟ, ಬಾಲಚಂದ್ರ ಭಟ್ಟ ಮತ್ತಿತರರ ಅರ್ಚಕರು ರಥೋತ್ಸವದ ವಿಧಿವಿಧಾನಗಳನ್ನು ನೆರವೇರಿಸಿದರು. ನೂರಾರು ಜನರು ರಥಕ್ಕೆ ಪೂಜೆ ಸಲ್ಲಿಸಿ ಕಾಣಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಮೊಕ್ತೆಸರ ಉಮೇಶ ಹೆಗಡೆ, ಪ್ರಮುಖರಾದ ಎಂ.ಎಂ.ಹೆಬ್ಬಾರ, ನಾರಾಯಣ ಹೆಬ್ಬಾರ, ರಾಧಾಕೃಷ್ಣ ಬೆಂಗಳೂರು, ಗಣೇಶ ಹೆಬ್ಬಾರ, ಶ್ರೀನಿವಾಸ ಹೆಗಡೆ, ಅನಂತ ಹೆಬ್ಬಾರ, ಎಂ ವಿ ಭಟ್ಟ, ಗಣಪಯ್ಯ ಹೆಗಡೆ, ಶ್ರೀಕಂಠ ಹೆಬ್ಬಾರ ಸೇರಿದಂತೆ ಹಲವು ಮುಖಂಡರು, ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ನಂತರದಲ್ಲಿ ಮಹಾ ಅನ್ನಸಂತರ್ಪಣೆ ನಡೆಯಿತು.

300x250 AD
Share This
300x250 AD
300x250 AD
300x250 AD
Back to top