• Slide
    Slide
    Slide
    previous arrow
    next arrow
  • ಕುಡಿಯುವ ನೀರು ಪೂರೈಕೆಗೆ 61 ಕೋ. ರೂ ಮಂಜೂರು: ಆರ್.ವಿ. ದೇಶಪಾಂಡೆ

    300x250 AD

    ದಾಂಡೇಲಿ: ನಗರದ ಜನತೆಯ ಬಹುವರ್ಷಗಳ ಬೇಡಿಕೆಯಂತೆ, ನಗರಕ್ಕೆ ಅತೀ ಅಗತ್ಯವಾಗಿ ಬೇಕಾಗಿದ್ದ ಕಾಳಿ ನದಿಯಿಂದ ದಿನದ 24 ಗಂಟೆ ಕುಡಿಯುವ ನೀರು ಪೋರೈಸಲು ಅಮೃತ 2.0 ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು 61 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಹೇಳಿದರು.
    ನಾನು ಹಲವಾರು ವರ್ಷಗಳಿಂದ ದಾಂಡೇಲಿ ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವಂತಾಗಲು ಪ್ರಯತ್ನ ನಡೆಸುತ್ತಲೇ ಬಂದಿದ್ದೇನೆ. ಈಗ ಕುಡಿಯುವ ನೀರು ಪೋರೈಕೆಗೆ ಅನುದಾನ ಮಂಜುರಾಗಿರುವುದು ಸಂತಸ ತಂದಿದೆ. ನಾನು ಈ ಹಿಂದೆ ಮಹಿಳೆಯರಿಗೆ ಸದ್ಯದಲ್ಲಿಯೇ ಸಿಹಿ ಸುದ್ದಿ ನೀಡುತ್ತೇನೆ ಎಂದು ಹೇಳಿದ್ದೆ,ಅದರಂತೆ ದಾಂಡೇಲಿ ನಗರಕ್ಕೆ ದಿನದ 24ಗಂಟೆ ನೀರು ಪೂರೈಕೆಯಾಗಲಿರುವುದರಿಂದ ಇದು ಇಲ್ಲಿನ ಮಹಿಳೆಯರು ಸಂತಸ ಪಡುವ ಸಂಗತಿಯಾಗಿದೆ ಎಂದು ದೇಶಪಾಂಡೆ ಅವರು ಹೇಳಿದರು.
    2022-23ನೇ ಸಾಲಿನ ರಾಜ್ಯ ಸರ್ಕಾರದ ವಿವೇಕ ಯೋಜನೆ ಅಡಿಯಲ್ಲಿ ಹಳೆ ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಎರಡು ಕೊಠಡಿ ನೀರ್ಮಾಣಕ್ಕೆ ಮಂಜೂರಿ ದೊರಕಿದೆ. ಹಾಗೆ ಜಿ+2 ಆಶ್ರಯ ಯೋಜನೆಯ ಮನೆಗಳ ಮೂರು ಕಂತು ತುಂಬಿದ ಫಲಾನುಭವಿಗಳಿಗೆ ಫೆ.15 ರಿಂದ 20ರ ಒಳಗೆ ಮನೆ ವಿತರಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದರು. ಇದೇ ರೀತಿ ಕ್ಷೇತ್ರದೆಲ್ಲೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನಗಳನ್ನು ಮಂಜೂರು ಮಾಡಲಾಗಿದೆ ಎಂದ ಅವರುಉ ಅಭಿವೃದ್ಧಿ ನಿಂತ ನೀರಾಗಬಾರದು. ಅದು ನಿರಂತರವಾದ ಪ್ರಕ್ರಿಯೆ ಎಂದರು.
    ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಸ್ಥಾಯಿ ಸಮಿತಿ ಅಧ್ಯಕ್ಷ ಅನೀಲ ರಾಯ್ಕರ, ನಗರಸಭೆ ಪೌರಾಯುಕ್ತ ಆರ್.ಎಸ್.ಪವಾರ್ ಹಾಗೂ ನಗರಸಭಾ ಸದಸ್ಯರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top