Slide
Slide
Slide
previous arrow
next arrow

ದಲಿತ ಲೇಖಕರ ಚಿಂತಕರ ಸಮಾವೇಶ: ಉದ್ಯಮಿ ಗಣಪತಿ ಜೋಗಳೇಕರ್’ಗೆ ಸನ್ಮಾನ

300x250 AD

ಬೆಳಗಾವಿ: ಬೆಳಗಾವಿಯ ಕುಮಾರ ಗಂಧರ್ವ ಸಭಾಭವನದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ, ಕರ್ನಾಟಕ ರಾಜ್ಯ ಘಟಕ ಬೆಂಗಳೂರು ಇವರು ಆಯೋಜಿಸಿದ 4ನೇ ರಾಜ್ಯ ಮಟ್ಟದ ದಲಿತ ಲೇಖಕರ ಚಿಂತಕರ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಅದರಲ್ಲಿ ಶಿರಸಿಯ ಯಶಸ್ವಿ ಉದ್ಯಮಿಗಳಾದ ಗಣಪತಿ ಬಿ. ಜೋಗಳೇಕರ್’ಗೆ ಸನ್ಮಾನಿಸಿ ಪಾರಿತೋಷಕವನ್ನು ನೀಡಲಾಯಿತು. ಇವರು ತಮ್ಮ ಸ್ವಂತ ಪರಿಶ್ರಮದಿಂದ ರಿಯಲ್ ಎಸ್ಟೆಟ್ ಉದ್ಯಮದಲ್ಲಿ ಯಶಸ್ಸು ಗಳಿಸಿ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದ ಕಾರ್ಯಚಟುವಟಿಕೆಗಳಿಗೆ ದಾನಿಗಳಾಗಿ ಕೊಡುಗೆ ನೀಡಿದನ್ನು ಪರಿಗಣಿಸಿ ಈ ಸನ್ಮಾನವನ್ನು ಮಾಡಲಾಯಿತು.
ಈ ಸಮಾವೇಶವನ್ನು ಶಾಸಕ ಸತೀಶ ಜಾರಕಿಹೊಳೆ, ಶಿವಸಿದ್ದ ಸೋಮೇಶ್ವರ ಮಹಾಸ್ವಾಮಿಗಳು ಸುಕ್ಷೇತ್ರ ವಿರಕ್ತಮಠ, ಭೂತರಾಮನಳ್ಳಿ ಬೆಳಗಾವಿ, ಹಾಗೂ ಎಸ್.ಪಿ. ಸುಮಾನಾಕ್ಷರ,ರಾಷ್ಟ್ರೀಯ ಅಧ್ಯಕ್ಷರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ, ಸುಭಾಷ ಕಾನಡೆ, ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top