Slide
Slide
Slide
previous arrow
next arrow

ನಿಸ್ವಾರ್ಥ ಸೇವೆಯಿಂದ ಮಾತ್ರ ವ್ಯಕ್ತಿಯ ಜೀವನದಲ್ಲಿ ಸಂತೋಷ ಹಾಗು ನೆಮ್ಮದಿ ಸಾಧ್ಯ: ಮೇ. ಆನಂದ್

300x250 AD

ಶಿರಸಿ:ಲಯನ್ಸ್ ರೀಜನ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಟ್ಟು 10 ಕ್ಲಬ್‌ಗಳು ಸೇರಿ ವರ್ಷಕ್ಕೊಮ್ಮೆ ನಡೆಸುವ ಲಯನ್ಸ್ ರೀಜನ್ ಮೇಳವು ಜ.29ರಂದು ರೀಜನ್ ಚೇರಮನ್ ಎಂ.ಜೆ.ಎಫ್. ಲಯನ್ ಜ್ಯೋತಿ ಭಟ್ಟರ ಅಧ್ಯಕ್ಷತೆಯಲ್ಲಿ ಲಯನ್ಸ್ ಭವನದಲ್ಲಿ ನಡೆಯಿತು. ಲಯನ್ಸ ವಿದ್ಯಾರ್ಥಿಗಳ ವಾದ್ಯವೃಂದದ ಆಕರ್ಷಕ ಕವಾಯಿತಿನ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಲಯನ್ಸ್ ಶಾಲೆಯ ಶಿಕ್ಷಕಿ ಗೈಡ್ ಕ್ಯಾಪ್ಟನ್ ಚೇತನಾ ಪಾವಸ್ಕರ ರಾಷ್ಟ್ರಧ್ವಜವನ್ನು ವೇದಿಕೆಗೆ ತಂದರು.
ಎಲ್ಲಾ 10 ಕ್ಲಬ್‌ಗಳು ತಮ್ಮ ಕ್ಲಬ್ ಗಳ ಪದಾಧಿಕಾರಿಗಳು ತಮ್ಮ ಕ್ಲಬ್ ಬ್ಯಾನರ್‌ನ್ನು ಆಕರ್ಷಕ ಪಥ ಸಂಚಲನದ ಮುಖಾಂತರ ವೇದಿಕೆಗೆ ತಂದರು. ಶಿರಸಿ ಲಯನ್ಸ್ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಕೂಟ ಪ್ರಾರಂಭವಾಯಿತು. ರೀಜನ್ ಕೂಟಕ್ಕೆ ಸಮಾರಂಭದ ಚೇರ್ಮನ್ ಲಯನ್ ರಮಾ ಪಟವರ್ಧನ ಸ್ವಾಗತಿಸಿದರು.ಲಯನ್ ಚೇರ್‌ಪರ್ಸನ್‌ಗಳಾದ ಲಯನ್ ಐಶ್ವರ್ಯ ಮಾಸುರಕರ್, ಲಯನ್ ನಾಗರಾಜ ಭಟ್ ವರದಿ ಮಂಡಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮೇಜರ್ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲಯನ್ ಆನಂದ ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಪಡೆಯಲು ಉತ್ಸುಕರಾಗಿರುತ್ತಾರೆ. ನಿಸ್ವಾರ್ಥ ಸೇವೆಯು ಈ ಎರಡನ್ನು ಪಡೆಯಲು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು. ಮತ್ತೊಬ್ಬ ಮುಖ್ಯ ಅತಿಥಿ ಪಿ.ಎಂ.ಜೆ.ಎಫ್ ಲಯನ್ ಡಾ. ರವಿ ಹೆಗಡೆ ಹೂವಿನಮನೆಯವರು ತಮ್ಮ ದಿಕ್ಸೂಚಿ ಮಾತುಗಳಲ್ಲಿ ಎಲ್ಲರನ್ನೂ ಹುರಿದುಂಬಿಸಿ ಲಯನ್ಸ್ನವರ ಸಮಾಜ ಸೇವೆಯನ್ನು ವಿವರಿಸಿದರು.
ರೀಜನಲ್ ಚೇರ್ಮನ್ ಎಂ.ಜೆ. ಎಫ್. ಲಯನ್ ಜ್ಯೋತಿ ಭಟ್ಟರವರು ತಮ್ಮ ರೀಜನ್‌ನಲ್ಲಿ ಬರುವ ಕ್ಲಬ್‌ಗಳ ಕಾರ್ಯಚಟುವಟಿಕೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಸುಂದರವಾಗಿ ಪ್ರಸ್ತುತಪಡಿಸಿದರು. ತಮ್ಮ ಮುಂದಿನ ಸೇವೆ ಕಾರ್ಯಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ರೀಜನ್‌ನ ಸೇವಾ ಕಾರ್ಯಗಳ ಸ್ಮರಣ ಸಂಚಿಕೆ “ವಿಕಾಸ” ವನ್ನು ಬಿಡುಗಡೆಗೊಳಿಸಲಾಯಿತು.
ಲಯನ್ಸ್ ಸದಸ್ಯರಿಗಾಗಿ ಲಯನ್ಸ್ ಕ್ವಿಜ್ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕ್ವಿಜ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮತ್ತು ಕ್ಲಬ್ ಬ್ಯಾನರ್ ಅತ್ಯುತ್ತಮವಾಗಿ ಪ್ರದರ್ಶಿಸಿದ ಕ್ಲಬಿಗೆ ಪ್ರಶಸ್ತಿ ನೀಡಲಾಯಿತು.ಕೊನೆಯಲ್ಲಿ ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷರು ಎಂ.ಜೆ.ಎಫ್ ತ್ರಿವಿಕ್ರಮ ಪಟವರ್ಧನ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top