• Slide
  Slide
  Slide
  previous arrow
  next arrow
 • U19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತಕ್ಕೆ ಪ್ರಧಾನಿ, ರಾಷ್ಟ್ರಪತಿ ಅಭಿನಂದನೆ

  300x250 AD

  ನವದೆಹಲಿ: 19 ವರ್ಷದೊಳಗಿನವರ ಮಹಿಳಾ ಟಿ-20 ವಿಶ್ವಕಪ್ ಗೆದ್ದಿರುವ ಭಾರತೀಯ ತಂಡಕ್ಕೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ವನಿತೆಯರ ಕ್ರಿಕೆಟ್‌ ತಂಡವನ್ನು ವಿಶ್ವಕಪ್ ಗೆದ್ದಿದ್ದಕ್ಕಾಗಿ  ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಅಭಿನಂದಿಸಿದ್ದಾರೆ.

  ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್‌ ಮಾಡಿ, ಈ ಪ್ರತಿಭಾವಂತ ಯುವತಿಯರು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಈ ಚಾಂಪಿಯನ್‌ಗಳು ದೇಶದ ಯುವಕರಿಗೆ, ವಿಶೇಷವಾಗಿ ಹುಡುಗಿಯರಿಗೆ ಸ್ಫೂರ್ತಿಯಾಗಿದ್ದಾರೆ. ಐತಿಹಾಸಿಕ ಗೆಲುವು ಭಾರತಕ್ಕೆ ಹೆಮ್ಮೆ ತಂದಿದೆ ಎಂದಿದ್ದಾರೆ.

  ಟ್ವೀಟ್‌ನಲ್ಲಿ ಉಪ ರಾಷ್ಟ್ರಪತಿ ಜಗದೀಪ್‌ ಧಂಖರ್‌ ಅವರು, ತಂಡದ ಅದ್ಭುತ ಪ್ರದರ್ಶನವು ಭಾರತದಲ್ಲಿ ಕ್ರಿಕೆಟ್‌ನ ಭವಿಷ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ಮುಂಬರುವ ಆಟಗಾರರನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದಾರೆ. ತಂಡದ ಮುಂದಿನ ಎಲ್ಲಾ ಪ್ರಯತ್ನಗಳಿಗಾಗಿ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

  ವಿಶೇಷ ಗೆಲುವಿಗಾಗಿ ಭಾರತೀಯ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ, ತಂಡ ಅತ್ಯುತ್ತಮವಾಗಿ ಆಡಿದೆ ಮತ್ತು ಅವರ ಯಶಸ್ಸು ಹಲವಾರು ಮುಂಬರುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.  ಮೋದಿ ಅವರು ತಂಡದ ಮುಂದಿನ ಪ್ರಯತ್ನಗಳಿಗಾಗಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

  https://twitter.com/narendramodi/status/1619707207049953280?ref_src=twsrc%5Etfw%7Ctwcamp%5Etweetembed%7Ctwterm%5E1619707207049953280%7Ctwgr%5Edca84182c8e8c5bd6906d24b99bfd05a95ecde4d%7Ctwcon%5Es1_c10&ref_url=https%3A%2F%2Fnews13.in%2Farchives%2F223641

  300x250 AD

  https://twitter.com/rashtrapatibhvn/status/1619742937428140033?ref_src=twsrc%5Etfw%7Ctwcamp%5Etweetembed%7Ctwterm%5E1619742937428140033%7Ctwgr%5Edca84182c8e8c5bd6906d24b99bfd05a95ecde4d%7Ctwcon%5Es1_c10&ref_url=https%3A%2F%2Fnews13.in%2Farchives%2F223641

  ಕೃಪೆ: http://news13.in

  Share This
  300x250 AD
  300x250 AD
  300x250 AD
  Leaderboard Ad
  Back to top