ಶಿರಸಿ: ಸ್ಕೊಡ್‌ವೆಸ್ ಸಂಸ್ಥೆಯು 2022-23ನೇ ಸಾಲಿನಲ್ಲಿ ಸಿಬ್ಬಂದಿಗಳಿಗಾಗಿ ಆಯೋಜಿಸಿರುವ ಸ್ಕೊಡ್‌ವೆಸ್ ಪ್ರೀಮಿಯರ್ ಲೀಗ್ -2023 ಕ್ರಿಕೆಟ್ ಪಂದ್ಯಾವಳಿಯು ನಗರದ ಎಮ್ಇಎಸ್. ಕ್ರೀಡಾಂಗಣದಲ್ಲಿ ಜ. 29 ರವಿವಾರದಂದು ನಡೆಯಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಕುಮಾರ ವಿ. ಕೂರ್ಸೆಯವರು ಸಂಸ್ಥೆಯಲ್ಲಿ ಕ್ರಿಕೆಟ್ ಪಂದ್ಯಾವಳಿಯ ಜೆರ್ಸಿ ಅನಾವರಣಗೊಳಿಸಿ ತಿಳಿಸಿದ್ದಾರೆ. ಸಂಸ್ಥೆಯ ಸಿಬ್ಬಂದಿಗಳಲ್ಲಿ ಕ್ರೀಡಾ ಸ್ಫೂರ್ತಿ ಉತ್ತೇಜಿಸುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು ಜೀವ ಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರರವರು, ರೋಟರಿ ಕ್ಲಬ್ ಶಿರಸಿಯ ಅಧ್ಯಕ್ಷರಾದ ಗಣೇಶ ಹೆಗಡೆ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ದಯಾನಂದ ಅಗಾಸೆ, ಕಾರ್ಯದರ್ಶಿಗಳಾದ ಸರಸ್ವತಿ ಎನ್ ರವಿಯವರು, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ ನಾಯ್ಕರವರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿರುವರು.
ಇಂದು ಸ್ಕೊಡ್‌ವೆಸ್ ಪ್ರೀಮಿಯರ್ ಲೀಗ್- ಕ್ರಿಕೆಟ್ ಪಂದ್ಯಾವಳಿ
