Slide
Slide
Slide
previous arrow
next arrow

ಶ್ರೀಲಕ್ಷ್ಮೀನಾರಾಯಣ ದೇವರ ವರ್ಧಂತಿ ಉತ್ಸವ ಸಂಪನ್ನ

300x250 AD

ಸಿದ್ದಾಪುರ: ಪಟ್ಟಣದ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮಿ ನಾರಾಯಣ ದೇವರ 31ನೇ ವಾರ್ಷಿಕ ವರ್ಧಂತಿ ಉತ್ಸವ ಸಂಪನ್ನವಾಯಿತು. ಶ್ರೀ ರಾಜರಾಜೇಶ್ವರಿ ಮಹಿಳಾಮಂಡಳಿ ವತಿಯಿಂದ ಲಲಿತ ಸಹಸ್ರನಾಮ ಪಠಣ, ಭಜನೆ ನಡೆಯಿತು.

ಗಣಹೋಮ, ನವಗ್ರಹ ಹೋಮ, ಪವನಾಮ ಹವನ, ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವೇದಮೂರ್ತಿ ನಾಗರಾಜ್ ಎಸ್.ಭಟ್, ಆನಂದ್ ಭಟ್ ಶಿರಸಿ, ಅನಂತ ಭಟ್ಟ ದಾಸನಕೊಪ್ಪ, ಮಂಜುನಾಥ ಭಟ್ಟ ಹಾಗೂ ಸಹಾಯಕ ಪುರೋಹಿತರಾಗಿ ವೆಂಕಟೇಶ್ ಭಟ್ ಮಂಜಗುಣಿ ಇವರ ನೇತೃತ್ವದಲ್ಲಿ ದೈವಜ್ಞ ಸಮಾಜದ ಅಧ್ಯಕ್ಷ ಶಾಂತಾರಾಮ ವಿ.ಶೇಟ ದಂಪತಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಈ ವರ್ಷ 12 ತಿಂಗಳು ಪೂಜಾ ಸೇವೆ ಸಲ್ಲಿಸಿದವರಿಗೆ ಪ್ರಸಾದ ನೀಡಿ ಗೌರವಿಸಲಾಯಿತು. ಸಾಯಂಕಾಲ ಪಟ್ಟಣದ ಪ್ರಮುಖ ಮಾರ್ಗದಲ್ಲಿ ವಿದ್ಯುತ್ ದೀಪಲಂಕಾರದೊoದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.ನಂತರ ಅಷ್ಟಾವಧಾನ ಸೇವೆಯಲ್ಲಿ ಕುಮಾರಿ ದೀಪ್ತಿ ವಿನಾಯಕ್ ಶೇಟ್ ಭರತನಾಟ್ಯ ಸೇವೆ ವಿಶೇಷ ಆಕರ್ಷಣೀಯವಾಗಿತ್ತು.ಈ ಸಂದರ್ಭದಲ್ಲಿ ಪುರೋಹಿತ ವರ್ಗದವರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು.

300x250 AD

ದೈವಜ್ಞ ಯುವಕ ಸಂಘ,ಮಹಿಳಾ ಮಂಡಳಿ, ಸರಾಫ ಸಂಘ, ವಿದ್ಯಾ ಪ್ರೋತ್ಸಾಹಕ ನಿಧಿ ಸಮಿತಿ, ದೈವಜ್ಞ ಸ್ಪೋರ್ಟ್ಸ್ ಕ್ಲಬ್‌ಗಳ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಸಮಾಜದ ಹಿರಿಯರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top