Slide
Slide
Slide
previous arrow
next arrow

ಜ.28ಕ್ಕೆ ಉಲ್ಲಾಳದಲ್ಲಿ ‘ಸಿಡಿದೆದ್ದ ರೈತರು’ ಸಾಮಾಜಿಕ ನಾಟಕ

300x250 AD

ಶಿರಸಿ: ಶ್ರೀ ಮಾರಿಕಾಂಬಾ ಗ್ರಾಮೀಣಾಭಿವೃದ್ಧಿ ಸಮಿತಿ ಉಲ್ಲಾಳ ಇದರ ಸಹಯೋಗದಲ್ಲಿ ಮಾರಿಕಾಂಬಾ ತರುಣ ನಾಟ್ಯ ಸಂಘ ಇವರ 24ನೇ ಕಲಾಕುಸುಮ ‘ಸಿಡಿದೆದ್ದ ರೈತರು’ ಎಂಬ ಸಾಮಾಜಿಕ ನಾಟಕದ ಪ್ರದರ್ಶನ ಜ.28, ಶನಿವಾರದಂದು ತಾಲೂಕಿನ ಬಿಸಲಕೊಪ್ಪದ ಉಲ್ಲಾಳ ಗ್ರಾಮದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಗೌರವ ಅತಿಥಿಗಳಾಗಿ ತಿಮ್ಮಯ್ಯ ಹೆಗಡೆ (ಸಿ.ಎ).ಹಾಗೂ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ರಾಘವೇಂದ್ರ ನಾಯ್ಕ ವಹಿಸಲಿದ್ದಾರೆ. ರಂಗ ವೇದಿಕೆಯಲ್ಲಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ..ಗ್ರಾಮೀಣ ರಂಗ ಕಲೆಯಾದ ನಾಟಕ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಮಿತಿಯ ಪ್ರಮುಖರು ಈ ಮೂಲಕ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top