ಯಲ್ಲಾಪುರ: ಡಿಸೆಂಬರ್ 08 ರಿಂದ 19 ರ ವರೆಗೆ ಬೆಂಗಳೂರಿನಲ್ಲಿ ನಡೆದ 60 ನೇ ರೊಲರ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕ ವಿಜೇತ ವಿಶ್ವದರ್ಶನ , ವಾಯ್.ಟಿ.ಎಸ್.ಎಸ್, ಮದರ್ ಥೆರೆಸಾ ಶಾಲಾ ಮಕ್ಕಳಿಗೆ ತಹಶಿಲ್ದಾರ್ ಶ್ರೀಕೃಷ್ಣ ಕಾಮ್ಕರ್ ತಾಲೂಕಾ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪತ್ರಿಕೆ ವಿತರಿಸಿದರು.
ನಂತರ ಮಾತನಾಡಿದ ಅವರು, ಕರ್ನಾಟಕ ತಂಡದ ತರಬೇತುದಾರ ದೀಲಿಪ್ ಹಣಬರ ಹಾಗು ಅಜೇಯ ಗಾವಡಾ ಅವರ ಬಳಿ ತರಬೇತಿ ಪಡೆದ ಯಲ್ಲಾಪುರದ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕ ಪಡೆದಿರುವದು ಸಂತಸದ ವಿಷಯ ಎಂದು ಹೇಳಿದರು.
ವಿಶ್ವದರ್ಶನ ಪ್ರೌಡಶಾಲೆಯ ಸಾನ್ವಿ, ತಪನ್ ,ಅನ್ಷ, ದೀಯಾ, ಅಂಜನಾ, ಗುರುರಾಜ , ತನಿಷಾ, ರುತುರಾಜ್ , ಕಿರಣ, ಸುಜನ್ಯಾ , ವಾಯ್ ಟಿ ಎಸ್ ಎಸ್ ಪ್ರೌಢಶಾಲೆಯ ಸಮರ್ಥ , ಮಧರ್ ತೆರೆಸಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೇಜಲ್, ತನ್ಮಯ, ಧಾನಿಷ್ , ಸೌರವ್ ಈ ಕ್ರೀಢಾಕೂಟದಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ. ಸ್ಪರ್ಧೆಯ ನಂತರ ಈ ಪ್ರಶಸ್ತಿ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗಿದ್ದು, ಜ.26 ರಂದು ವಿತರಿಸಲಾಯಿತು.