Slide
Slide
Slide
previous arrow
next arrow

ಸಂಸ್ಕೃತದಲ್ಲಿ ಡಾಕ್ಟರೇಟ್ ಪದವಿ ಪಡೆದ ನಾರಾಯಣಗೆರೆಯ ಕಿರಣ ಭಟ್

300x250 AD

ಯಲ್ಲಾಪುರ: ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಾಹಿತ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಿರಣ ಶಂಕರ ಭಟ್ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಮೂಲತಃ ತಾಲ್ಲೂಕಿನ ಸಹಸ್ರಳ್ಳಿ ಗ್ರಾಮದ ನಾರಾಯಣಗೆರೆಯ ಶಂಕರ ಭಟ್ಟ ಮತ್ತು ಸರಸ್ವತಿ ಭಟ್ಟ ದಂಪತಿಗಳ ಪುತ್ರರಾದ ಕಿರಣ ಭಟ್ಟ  ಪ್ರಾಥಮಿಕ  ಶಿಕ್ಷಣವನ್ನು ಯಲ್ಲಾಪುರದಲ್ಲಿ ಪ್ರೌಢಶಿಕ್ಷಣವನ್ನು ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಮುಗಿಸಿ ನಂತರ ಉನ್ನತ ವ್ಯಾಸಂಗವನ್ನು ಹೈದ್ರಾಬಾದನಲ್ಲಿ ಮುಗಿಸಿ 12 ವರ್ಷ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಿದ್ದಾರೆ. ಕಳೆದ 8 ವರ್ಷಗಳಿಂದ ಸಂಸ್ಕೃತ ಭಾಷೆಯ ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದಾರೆ.

300x250 AD

ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಾಹಿತ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಿರಣ್ ಶಂಕರ್ ಭಟ್ ಅವರಿಗೆ ಡಾಕ್ಟರೇಟ್ ನೀಡಲಾಗಿದೆ. ಆಚಾರ್ಯ ಚಕ್ರವರ್ತಿ ರಂಗನಾಥವರ್ಯರ ಮಾರ್ಗದರ್ಶನದಲ್ಲಿ ಸಾಹಿತ್ಯ ವಿಭಾಗ `ಆಚಾರ್ಯ ಎಚ್. ವಿ. ನಾಗರಾಜವರ್ಯರು ಬರೆದಿರುವ ‘ಶತಕಕಾವ್ಯಗಳ ವಿಮರ್ಶಾತ್ಮಕ ಅಧ್ಯಯನ’ ವಿಷಯದ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಅಂತೆಯೇ ವಿಶ್ವವಿದ್ಯಾಲಯದ ಸಾಹಿತ್ಯ ವಿಭಾಗ ನಡೆಸಿದ ಮೌಖಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದಕ್ಕಾಗಿ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.  

Share This
300x250 AD
300x250 AD
300x250 AD
Back to top