Slide
Slide
Slide
previous arrow
next arrow

ಜ.27ರಿಂದ ಕರುನಾಡ ಕರಾವಳಿ ಉತ್ಸವ: ಎನ್.ದತ್ತಾ

300x250 AD

ಕಾರವಾರ: ಕನ್ನಡ ಪರ ಸಂಘಟನೆಗಳು, ಸಂಕಲ್ಪ ಕಮ್ಯುನಿಕೇಶನ್ ಹಾಗೂ ನಗರದ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜ.27ರಿಂದ ಫೆ.8ರವರೆಗೆ ಮಯೂರವರ್ಮ ವೇದಿಕೆಯಲ್ಲಿ ಕರುನಾಡ ಕರಾವಳಿ ಉತ್ಸವ ಹಮ್ಮಿಕೊಂಡಿರುವುದಾಗಿ ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 13 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್, ಆಹಾರ ಮಳಿಗೆ ಹಾಗೂ ವಸ್ತು ಪ್ರದರ್ಶನ ಇರಲಿದೆ. ಮೊದಲ ದಿನ (ಜ.27) ಅಮ್ಯೂಸ್ಮೆಂಟ್ ಪಾರ್ಕ್ ಉದ್ಘಾಟನೆ ಮಾಡಲಿದ್ದೇವೆ. ಈ ಮಧ್ಯೆ ಶೈನಿಂಗ್ ಸ್ಟಾರ್ ಅವರಿಂದ ಹಿರಿಯ ನಾಗರಿಕರಿಗೆ ಸಂಗೀತ ಕಾರ್ಯಕ್ರಮ, ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ ಫೆ.2ರಿಂದ 6ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರೊಂದಿಗೆ ಹೊರ ರಾಜ್ಯ ಹಾಗೂ ಬಾಲಿವುಡ್ ತಾರೆಯರು ಬರಲಿದ್ದಾರೆ. ವಿಶೇಷವಾಗಿ ಕಾಂತಾರ ಚಿತ್ರ ತಂಡ ಮತ್ತು ಇಂಡಿಯನ್ ಐಡಲ್‌ನ ಸಂಗೀತ ತಾರೆಯರು ಆಗಮಿಸಲಿದ್ದಾರೆ. ಇದರೊಂದಿಗೆ ಕಡಲ ತೀರದಲ್ಲಿ ದಿನೇಶ್ ಹೊಳ್ಳ ಅವರ ನೇತೃತ್ವದಲ್ಲಿ ಗಾಳಿಪಟ ಸ್ಪರ್ಧೆ ಕೂಡಾ ಇರಲಿದೆ. ತಾಲೂಕಿನ ಸಾಧಕರು ಹಾಗೂ ಹಿರಿಯರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಿದ್ದೇವೆ ಎಂದು ತಿಳಿಸಿದರು.
ಆಟೋರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ಕಾರ್ಯದರ್ಶಿ ಉದಯ ನಾಯ್ಕ, ಮದನ ಗುನಗಿ, ಸುಜಿತ್ ಮ್ಹಾಳ್ಸೇಕರ, ಮನೋಜ ಗುನಗಿ ಹಾಗೂ ಮಂಗೇಶ್ ನಾಯ್ಕ ಇದ್ದರು.

300x250 AD
Share This
300x250 AD
300x250 AD
300x250 AD
Back to top