Slide
Slide
Slide
previous arrow
next arrow

ಜ್ಞಾನ, ಚಲನಶೀಲತೆಗೆ ಪ್ರೇರಣಾ ಶಿಬಿರ ಅವಶ್ಯಕ: ಶಾಂತೇಶ ನಾಯಕ

300x250 AD

ಕಾರವಾರ: ಶಿಕ್ಷಣವು ಬದುಕಿನ ಅವಿಭಾಜ್ಯ ಅಂಗವಾಗಿದ್ದರಿಂದ ವಿದ್ಯಾರ್ಥಿಗಳು, ಶಿಸ್ತಿನ ಶಿಕ್ಷಣದತ್ತ ಗಮನಹರಿಸಬೇಕಾಗಿದೆ. ವಿದ್ಯಾರ್ಥಿಯ ಜ್ಞಾನ ಮತ್ತು ಚಲನಶೀಲತೆಗೆ ಪ್ರೇರಣಾ ತರಬೇತಿ ಶಿಬಿರ ಅವಶ್ಯಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಹೇಳಿದರು.
ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಲಯನ್ಸ್ ಕ್ಲಬ್ ಸದಾಶಿವಗಡ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡಿದ್ದ ತಾಲೂಕಾ ಮಟ್ಟದ ಪ್ರೇರಣಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪ್ರತಿಕ್ಷಣವೂ ನಾವಿನ್ಯತೆಯ ಹೆಜ್ಜೆಯೊಂದಿಗೆ ಹೊಸ ಆಲೋಚನೆಗಳನ್ನು ಮಾಡಬೇಕು. ಕಳೆದ ವರ್ಷ ಕಾರವಾರ ತಾಲೂಕು ಫಲಿತಾಂಶದಲ್ಲಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅದರಂತೆ ಈ ವರ್ಷದಲ್ಲಿ ಸಾಗಬೇಕೆಂಬ ಸದುದ್ದೇಶದಿಂದ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಕಲಿಕೆಯಲ್ಲಿನ ಎಡರು, ತೊಡರುಗಳನ್ನು ಹಂಚಿಕೊಳ್ಳುವ ನಿರ್ಭಯ ವಾತಾವರಣದ ಅವಕಾಶವನ್ನು ಈ ಶಿಬಿರಗಳು ಒದಗಿಸುತ್ತಿದ್ದು, ಕ್ರಮಬದ್ಧವಾಗಿ ಎಲ್ಲ ವಿಷಯಗಳನ್ನು ತಿಳಿಸಲು ಮತ್ತು ಬರೆಯಲು ಪ್ರೋತ್ಸಾಹಿಸುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ನಮ್ಮ ಚಿತ್ತ ಗುಣಾತ್ಮಕ ಫಲಿತಾಂಶದತ್ತ ಎಂಬ ಸಂಕಲ್ಪ ಎಲ್ಲರಲ್ಲಿ ಮೂಡಲಿ ಎಂದು ಆಶಿಸಿದರು.
ಶಾಲೆಯ ಮುಖ್ಯಾಧ್ಯಾಪಕ ದಿನೇಶ ವಿ.ಗಾಂವಕರ ವಹಿಸಿ, ಶಿಕ್ಷಣವೇ ಶಕ್ತಿ. ಆ ಶಕ್ತಿಯನ್ನು ಪಡೆಯಲು ಜೀವನದಲ್ಲಿ ತಪಸ್ಸು ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ 10ನೇ ವರ್ಗ ಪ್ರಮುಖ ಹಂತವಾಗಿರುವುದರಿಂದ ಎಲ್ಲ ವಿದ್ಯಾರ್ಥಿಗಳು ಭಯಮುಕ್ತರಾಗಿ ಅಭ್ಯಾಸದಲ್ಲಿ ನಿರತರಾಗಿ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಅತ್ಯಂತ ಸುಲಭವಾಗಿ ಮಾರ್ಗದರ್ಶನ ಮಾಡುತ್ತೇವೆ ಎಂದರು.
ವೇದಿಕೆಯ ಮೇಲೆ ಶಿಕ್ಷಣ ಸಂಯೋಜಕ ಪ್ರಕಾಶ ಚವ್ಹಾಣ, ಸಂಪನ್ಮೂಲ ವ್ಯಕ್ತಿ ಶೈಲೇಶ ನಾಯ್ಕ ಉಪಸ್ಥಿತರಿದ್ದರು. ರಕ್ಷಿತಾ ಮಿರಾಶಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕಾರವಾರ ತಾಲೂಕಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಸುಜಾತಾ ಜಾವಕರ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ ಬಿಷ್ಟಣ್ಣನವರ ನಿರೂಪಿಸಿದರು. ಇಂಗ್ಲೀಷ್ ಕ್ಲಬ್ಬಿನ ಅಧ್ಯಕ್ಷ ಜೆ.ಜಿ.ತಿಪ್ಪೇಸ್ವಾಮಿ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top