Slide
Slide
Slide
previous arrow
next arrow

ಭಾರತೀಯ ಪರಂಪರೆಯನ್ನು ವೈಜ್ಞಾನಿಕವಾಗಿ ಅರಿಯಲು ವಿಜ್ಞಾನ ಅತ್ಯವಶ್ಯ: ಡಾ.ಸುಯಮೀಂದ್ರ ಎಸ್.

300x250 AD

ಶಿರಸಿ: ನಗರದ ಎಂಇಎಸ್ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ವಾರ್ಷಿಕ ಸ್ನೇಹ ಸಮ್ಮೇಳನವು ಎಂಇಎಸ್ ವಾಣಿಜ್ಯ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಧಾರವಾಡದ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಡಿ.ಎನ್.ಎ. ರಿಸರ್ಚ ಸೈಂಟಿಸ್ಟ್ ಡಾ.ಸುಯಮೀಂದ್ರ ಎಸ್. ಕುಲಕರ್ಣಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತೀಯ ಪರಂಪರೆಯ ಮಹೋನ್ನತಿಯು ವಿಜ್ಞಾನ. ಭಾರತೀಯ ಸಂಸ್ಕೃತಿಯ ಆಚಾರ-ವಿಚಾರಗಳು ಎಲ್ಲವೂ ಇನ್ನು ಮುಂದುವರೆದ ವಿಜ್ಞಾನವನ್ನು ತಿಳಿಸುತ್ತಿವೆ. ಭಾರತೀಯ ಪರಂಪರೆಯನ್ನು ವೈಜ್ಞಾನಿಕವಾಗಿ ಅರಿಯಲು ವಿಜ್ಞಾನ ಇನ್ನು ಮುಂದುವರಿಯಬೇಕು. ಮನುಷ್ಯನ D.N.A & R.N.A ಅವುಗಳ ಮುಖಾಂತರ ಎಲ್ಲ ವಿಷಯಗಳನ್ನು ಅರಿಯಲು ಸಾಧ್ಯವಿದೆ ಎಂದರು.
ಕಾಲೇಜು ಉಪಸಮಿತಿ ಅಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ ಮಾತನಾಡಿ ನಮ್ಮ ವಿದ್ಯಾಲಯವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ದವಾಗಿದೆ. ಅದರ ಸದಪಯೋಗ ವಿದ್ಯಾರ್ಥಿಗಳು ಪಡೆದು ಪಾಲಕರಿಗೆ, ವಿದ್ಯಾಲಯಕ್ಕೆ ಕೀರ್ತಿ ತರಲು ಕರೆ ನೀಡಿದರು.
ಎಂ. ಇ. ಎಸ್. ಅಧ್ಯಕ್ಷ ಜಿ. ಎಂ. ಹೆಗಡೆ ಮುಳಖಂಡ, ಇವರು ಸಭೆಯ ಅಧ್ಯಕ್ಷೀಯ ಮಾತುಗಳನ್ನಾಡಿ ವಿದ್ಯಾರ್ಥಿಗಳ ಜೀವನದ ಮಾರ್ಗದರ್ಶಕರು ನಿಜವಾಗಿ ಉಪನ್ಯಾಸಕರಿದ್ದಾರೆ. ಅವರ ಸೇವೆಯ ಫಲವೇ ವಿದ್ಯಾಲಯದ ಹಿರಿಮೆ-ಗರಿಮೆಗಳು. ಇಂತಹ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶ್ರೇಯಸ್ಸನ್ನು ಹೊಂದಲಿ ಎಂದು ಆಶಿಸಿದರು.
ಪ್ರಾಚಾರ್ಯರಾದ ಡಾ. ರಾಘವೇಂದ್ರ ಹೆಗಡೆಕಟ್ಟೆ ಅತಿಥಿ -ಅಭ್ಯಾಗತರನ್ನು ಸ್ವಾಗತಿಸಿ – ಪರಿಚಯಿಸಿದರು.
ಉಪನ್ಯಾಸಕರಾದ ಶ್ರೀಮತಿ ಕಾಂಚನಾ ನಾಯ್ಕ ಕಾಲೇಜಿನ ವಾರ್ಷಿಕ ವರದಿ ಓದಿದರು. ಕ್ರೀಡಾ ವರದಿಯನ್ನು ಎ.ಜಿ. ಹೆಗಡೆ ಸಾದರಪಡಿಸಿದರು.
ಶೇಕಡಾ 100ಫಲಿತಾಂಶ ಪಡೆದ ವಿಷಯಾಧಾರಿತ ಉಪನ್ಯಾಸಕರನ್ನು ಸಮ್ಮಾನಿಸಲಾಯಿತು. ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್. ಕೆ. ಹೆಗಡೆ ಉಪಸ್ಥಿತರಿದ್ದರು.
ನಿವೃತ್ತರಾಗಿರುವ ಕ್ರೀಡಾ ನಿರ್ದೇಶಕ ಎ.ಜಿ. ಹೆಗಡೆ ದಂಪತಿಗಳನ್ನು ಈ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಿ ಬೀಳ್ಕೋಡಲಾಯಿತು. ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಬಹುಮಾನ ಪಡೆದ ಹಲವಾರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಮತ್ತು ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದವರಿಗೂ ಪಾರಿತೋಷಕವನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಉಪನ್ಯಾಸಕರಾದ ವಿದ್ವಾನ್ ಅನಂತಮೂರ್ತಿ ಭಟ್, ಯಲೂಗಾರ ನಿರೂಪಿಸಿದರು. ಉಪನ್ಯಾಸಕರಾದ ಶಶಿಧರ ಅಬ್ಬಿ ವಂದನಾರ್ಪಣೆ ಗೈದರು.

300x250 AD
Share This
300x250 AD
300x250 AD
300x250 AD
Back to top