• first
  Slide
  Slide
  previous arrow
  next arrow
 • ಗುಂದದಲ್ಲಿ ಸ್ವರ್ಣವಲ್ಲಿ ಮಠದಿಂದ ಸಭೆ

  300x250 AD

  ಜೊಯಿಡಾ: ತಾಲೂಕಿನ ಗುಂದದ ಯರಮುಖ ನಂದಿಗದ್ದಾ ಸೇವಾ ಸಹಕಾರಿ ಸಭಾ ಭವನದಲ್ಲಿ  ಶ್ರೀಸ್ವರ್ಣವಲ್ಲಿ ಮಠದ ಮಹಾದ್ವಾರ ಮತ್ತು ಗುರುಮೂರ್ತಿ ಭವನದ ಹೊಸ ಕಟ್ಟಡದ ಕುರಿತು ಗುಂದ ಸೀಮಾ ಪರಿಷತ್ ಹಾಗೂ ಸ್ವರ್ಣವಲ್ಲಿ ಮಹಾಸಂಸ್ಥಾನ ಅಡಿಯಲ್ಲಿ ಸಭೆ ನಡೆಯಿತು.
  ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿ.ಎನ್.ಹೆಗಡೆ ಬೊಮ್ಮನಹಳ್ಳಿ, ಶ್ರೀಸ್ವರ್ಣವಲ್ಲಿ ಮಠಕ್ಕೆ ಮಹಾದ್ವಾರ ಹಾಗೂ ಹೊಸ ಗುರುಮೂರ್ತಿ ಭವನದ ಕಟ್ಟಡ ನಿಧಿಗೆ ಭಕ್ತರಿಂದ ತಮ್ಮ ಕೈಲಾದ ದೇಣಿಗೆ ಪಡೆಯಲಾಗುತ್ತಿದ್ದು, ಭಕ್ತರು ಸಹಕರಿಸಬೇಕಾಗಿ ಕೇಳಿಕೊಂಡರು.
  ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಿ.ವಿ.ಹೆಗಡೆ, ಆರ್.ಎಸ್.ಹೆಗಡೆ ಬೈರುಂಬೆ, ಮಠದ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಗಾಂವ್ಕರ್, ಗುಂದ ಸೀಮಾ ಅಧ್ಯಕ್ಷ ಡಿ.ಟಿ.ಹೆಗಡೆ, ಪ್ರವೀಣ ಭಟ್ಟ, ಗೋಪಾಲ ಭಟ್ಟ, ಸುಧಾಮ ದಾನಗೇರಿ ಸೇರಿದಂತೆ ಬಹಳಷ್ಟು ಜನರು ಹಾಜರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top