Slide
Slide
Slide
previous arrow
next arrow

ಪ್ಲಾಸ್ಟಿಕ್ ಧ್ವಜ ಮಾರಾಟ ನಿಷೇಧಿಸುವಂತೆ ಆಗ್ರಹ: ಡಿಸಿಗೆ ಮನವಿ ಸಲ್ಲಿಕೆ

300x250 AD

ಶಿರಸಿ: ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಜನವರಿ 26 ರಂದು, ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ, ಅದೇ ಕಾಗದದ/ಪ್ಲಾಸ್ಟಿಕ್‍ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಬೇಗನೇ ನಾಶವಾಗುವುದಿಲ್ಲ, ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ. ಅದಲ್ಲದೆ`ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ಮಾಡುವುದು’ ಸಂವಿಧಾನಬಾಹಿರವಾಗಿದೆ. 

ಹಾಗೆಯೇ, ಈ ವರ್ಷ, ಅಂಗಡಿಗಳಲ್ಲಿ ಮತ್ತು ಇ-ಕಾಮರ್ಸ್ ಜಾಲತಾಣಗಳಲ್ಲಿ(ವೆಬ್‍ಸೈಟ್) ತ್ರಿವರ್ಣ ಮಾಸ್ಕಗಳನ್ನು  ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ತ್ರಿವರ್ಣ ಮಾಸ್ಕ್ ಬಳಕೆಯಿಂದ ರಾಷ್ಟ್ರಧ್ವಜದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. `ತ್ರಿವರ್ಣ ಮಾಸ್ಕ್’ ದೇಶಭಕ್ತಿಯ ಪ್ರದರ್ಶನದ ಮಾಧ್ಯಮವಲ್ಲ, ಅಲ್ಲದೇ ಧ್ವಜ ಸಂಹಿತೆಗನುಸಾರ `ರಾಷ್ಟ್ರಧ್ವಜವನ್ನು ಈ ರೀತಿ ಬಳಸುವುದು’ ಧ್ವಜಕ್ಕೆ ಮಾಡಿದ ಅವಮಾನವೇ ಆಗಿದೆ. ಇದು `ರಾಷ್ಟ್ರೀಯ ಗೌರವದ ಮಾನನಷ್ಟ ತಡೆ ಕಾಯ್ದೆ 1971’ರ ಉಲ್ಲಂಘನೆಯಾಗಿದೆ. ಆದ್ದರಿಂದ, `ತ್ರಿವರ್ಣ ಮಾಸ್ಕ್’ ಮಾರಾಟ ಮಾಡುವ ಮತ್ತು ಬಳಸುವವರ ವಿರುದ್ಧ ಅಪರಾಧಗಳನ್ನು ನಮೂದಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.

300x250 AD

ಈ ಸಂಧರ್ಭದಲ್ಲಿ ಹಿಂದುತ್ವನಿಷ್ಠರಾದ ಪ್ರಶಾಂತ್ ಪೆಡನೇಕರ್ಶ್ರೀ ಬಾಬು ಅಂಬಿಗ, ಬಾಲಚಂದ್ರ ಅಂಬಿಗ, ರಾಮದಾಸ ಕೂಡತರಕರ್, ಅಮಿತ್ ದಳವಿ, ಪಂಡರಿನಾಥ ಗುರವ, ಪ್ರಶಾಂತ್ ಪೆಡನೇಕರ್,  ಹಿಂದೂ ಜನಜಾಗೃತಿ ಸಮಿತಿಯ ಸಾಗರ್ ಕುರ್ಡೆಕರ, ಸನಾತನ ಸಂಸ್ಥೆಯ ಸೋಮೇಶ್ ಗುರವ, ಅಶೋಕ್ ಚೌಹಾಣ್, ಸೌ ಗೀತಾ ಸೈಲ್, ಉಲ್ಲಾಸ್ ಮುಂಜು ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top