ಅಂಕೋಲಾ: ತಾಲೂಕಿನ ಹಿಲ್ಲೂರಿನ ಹರಿಹರ ವಿ.ಹರಿಕಾಂತ ಅವರನ್ನು ರಾಜ್ಯ ಮಟ್ಟದ ವರ್ಷದ ಕನ್ನಡಿಗ 2023 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಾಮಾಣಿಕ ಸಮಾಜ ಸೇವೆ, ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘ- ಸಂಸ್ಥೆಗಳ ಮೂಲಕ ಕಳೆದ ಒಂದೂವರೆ ದಶಕದಿಂದ ಮಾಡುತ್ತಿರುವ ಇವರ ಚಟುವಟಿಕೆಗಳನ್ನು ಗುರುತಿಸಿ ತುಮಕೂರಿನ ಮಾತೃಭೂಮಿ ಸೇವಾ ಟ್ರಸ್ಟ್ನವರು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಮಾತೃಭೂಮಿ ಸೇವಾ ಟ್ರಸ್ಟ್ ವತಿಯಿಂದ ಜ.22ರಂದು ತುಮಕೂರಿನ ಕನ್ನಡ ಭವನದಲ್ಲಿ ನಡೆಯುವ ‘ಕನ್ನಡ ಸಂಭ್ರಮ ಹಬ್ಬ’ ಗಣ್ಯಾತಿಥರ ಭವ್ಯ ವೇದಿಕೆಯಲ್ಲಿ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ, ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುದೆಂದು ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷೆ ಡಾ.ಜ್ಯೋತಿ ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಿಹರ ಹರಿಕಾಂತಗೆ ವರ್ಷದ ಕನ್ನಡಿಗ ಪ್ರಶಸ್ತಿ
