ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಆಯೋಜಿಸಿದ್ದ, ಸಿಂಗಲ್ ಝೋನ್ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ, ಎಂ.ಇ.ಎಸ್ ನ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರೀರಕ್ಷಾ ನಾಯ್ಕ್, ಪ್ರಜ್ಞಾ ತೇಟಿ, ನಿಸರ್ಗ ಕೋಟಿ, ಸಂಭ್ರಮ ಎಂ, ಸಂಜನಾ ದಿವಾಕರ್, ಶಿಲ್ಪ ಕಳಸ, ಸಾತ್ವಿಕಾ ಕಾರವಾರದ ಶಿವಾಜಿ ಆರ್ಟ್ಸ್ ಮತ್ತು ಕಾಮರ್ಸ್ ಮತ್ತು ಬಿ.ಸಿ.ಎ ಕಾಲೇಜು ಬಾಡದಲ್ಲಿ ನಡೆದ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಸಾಧನೆಗೆ ಎಂ ಇ ಎಸ್ ನ ಅಧ್ಯಕ್ಷರಾದ ಜಿ.ಎಂ. ಹೆಗಡೆ ಮುಳಖಂಡ ,ಉಪಸಮಿತಿ ಅಧ್ಯಕ್ಷ ಎಸ್. ಕೆ. ಹೆಗಡೆ ಭಾಗವತ್, ಪ್ರಾಚಾರ್ಯ ಡಾ. ಟಿ. ಎಸ್. ಹಳೆಮನೆ, ಸದಸ್ಯರು, ಪದಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.