ಜೊಯಿಡಾ: ತಾಲೂಕಿನ ಅನಮೋಡ ಚೆಕಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಮತ್ತು ಸಾಗಾಣಿಕೆ ಬಳಸಿದ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಮೂಲದ ಸಯ್ಯದ್ ಜುನೇದ ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲೀಕನನ್ನು ಪತ್ತೆ ಹಚ್ಚಲಾಗುತ್ತಿದೆ. 207 ಲೀ. ವಿವಿಧ ರೀತಿಯ ಮದ್ಯ, ವಾಹನ ಸೇರಿ ಒಟ್ಟು ಅಂದಾಜು ಮೌಲ್ಯ 7,27,760 ರೂ.ನ ಅಬಕಾರಿ ಸ್ವತ್ತುಗಳನ್ನ ಜಪ್ತಿಪಡಿಸಿಕೊಳ್ಳಲಾಗಿದೆ.
ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ಹಾಗೂ ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅನಮೋಡ ಅಬಕಾರಿ ಎಸ್‌ಐ ಶ್ರೀಕಾಂತ್ ಬಿ.ಅಸೋದೆ, ಸಿಬ್ಬಂದಿ ರಾಜು ಭಟ್ಕಳ್, ನಾಗೇಂದ್ರ ಬಿ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.