ಕುಮಟಾ: ಮಕರ ಸಂಕ್ರಾಂತಿ ಹಬ್ಬವು ತಾಲೂಕಿನಾದ್ಯಂತ ಸಂಭ್ರಮ, ಸಡಗರದಿಂದ ನಡೆದಿದ್ದು, ಪಟ್ಟಣದ ಹಳೇ ಹೆರವಟ್ಟಾದ ಮಹಾಸತಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀ ಮಹಾಸತಿ ದೇವಸ್ಥಾನ ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ಹಬ್ಬದ ವಿಶೇಷ ಪೂಜೆ ಸಲ್ಲಿಸಿ, ಧನ್ಯತೆ ಮೆರೆದರು.
ಹೆಣ್ಣುಮಕ್ಕಳ ಹಬ್ಬವೆಂದೆ ಪ್ರಸಿದ್ಧವಾಗಿರುವ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ನಿಮಿತ್ತ ಕುಮಟಾ ಪಟ್ಟಣದ ಹಳೇ ಹೆರವಟ್ಟಾದ ಮಹಾಸತಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀ ಮಹಾಸತಿ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ಪೂಜೆ ನಡೆಯಿತು. ಭಕ್ತರು ದೇವಿಯ ಸನ್ನಿಧಿಯಲ್ಲಿ ಬಾಳೆಗೊನೆ ಸೇವೆ ಸೇರಿದಂತೆ ಸಿಂಗಾರ, ಹಣ್ಣು-ಕಾಯಿ ಪೂಜೆ ಸಲ್ಲಿಸಿದರು. ದೇವಿಗೆ ಎಳ್ಳುಬೆಲ್ಲ, ಸಂಕ್ರಾಂತಿ ಕಾಳುಗಳನ್ನು ನೈವೆದ್ಯ ಮಾಡಿ, ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.
ತಾಲೂಕಿನ ವಿವಿಧ ದೇವಿ ದೇವಾಲಯಗಳಲ್ಲಿ ಭಕ್ತರು ವಿಶೇಷ ಸಂಕ್ರಾಂತಿ ಪೂಜೆ ಸಲ್ಲಿಸಿ, ಹರಕೆ ಸಮರ್ಪಿಸಿದರು. ದೇವಿಗೆ ಎಳ್ಳುಬೆಲ್ಲದ ನೈವೆದ್ಯ ಮಾಡಿ ಇಷ್ಟಾರ್ಥ ಸಿದ್ದಿಸುವಂತೆ ಪ್ರಾರ್ಥಿಸಿದರು. ಮಹಿಳೆಯರು ಅರಿಶಿನಕುಂಕುಮ ಮತ್ತು ಸಂಕ್ರಾಂತಿ ಕಾಳುಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿ ಸಂಭ್ರಮಿಸಿದರು.