ಹೊನ್ನಾವರ: ಕರ್ನಾಟಕ ಕ್ರಾಂತಿರಂಗ ಸಾಲ್ಕೋಡ್ ಘಟಕದ ಐದನೇ ವರ್ಷದ ವಾರ್ಷಿಕೋತ್ಸವ ದರ್ಬೆಜಡ್ಡಿ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸೇಫ್ ಸ್ಟಾರ್ ಮ್ಯಾನೇಜಿಂಗ್ ಡೈರೆಕ್ಟರ್, ಮಾವಿನಕುರ್ವಾ ಗ್ರಾ.ಪಂ. ಅಧ್ಯಕ್ಷ ಜಿ.ಜಿ.ಶಂಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಿನ ಭಾಷೆ, ನೆಲ, ಜಲದ ಕುರಿತು ಪ್ರೀತಿ ಹೆಚ್ಚಾಗಲು ಕನ್ನಡಪರ ಕಾರ್ಯಕ್ರಮ ನಡೆಯಬೇಕಿದೆ. ಗ್ರಾಮದಲ್ಲಿ ಒಗ್ಗಟ್ಟು ಮನೋರಂಜನೆ ಜೊತೆಗೆ ಸಂಘಟನೆಯ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಲು ಇಂತಹ ವಾರ್ಷಿಕೋತ್ಸವ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ಗ್ರಾಮೀಣ ಭಾಗದ ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ಅದನ್ನು ಬಗೆಹರಿಸುವ ಕಾರ್ಯ ಕ್ರಾಂತಿರಂಗ ಮಾಡುತ್ತಿದೆ. ಸಂಘಟನೆಯ ಕಾರ್ಯದ ಜೊತೆ ಮನೊರಂಜನೆಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಗ್ರಾಮದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿದೆ ಎಂದರು.
ಉದ್ಯಮಿ ಶ್ರೀಕಾಂತ ನಾಯ್ಕ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪೊತ್ಸಾಹಿಸುವ ಜೊತೆ ಗ್ರಾಮದ ಅಭಿವೃದ್ದಿಗೆ ಶ್ರಮಿಸುವ ಸಂಘಟನೆಯ ಕಾರ್ಯ ಮಾದರಿಯಾಗಿದೆ. ಭಾಷೆ, ಗಡಿ ಸಮಸ್ಯೆಯ ಜೊತೆಗೆ ಸರ್ಕಾರದ ಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಸಂಘಟನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಸಂಘಟನೆಯು ಇನ್ನಷ್ಟು ಸುಭದ್ರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಯಲ್ಲಿ ಸಂಘಟನೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಚಿನ ನಾಯ್ಕ, ಉದ್ದಿಮೆದಾರರಾದ ಸುರೇಶ ಶೆಟ್ಟಿ, ಕೃಷ್ಣ ಗೌಡ ಹಳಗೇರಿ, ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ, ಪ್ರಗತಿ ವಿದ್ಯಾಲಯದ ಶಿಕ್ಷಕ ಜಿ.ಆರ್.ನಾಯ್ಕ, ಊರಿನ ಮುಖಂಡರಾದ ನಾರಾಯಣ ಮರಾಠಿ, ದೇವು ಮರಾಠಿ, ಶಾಲಾ ಮುಖ್ಯ ಶಿಕ್ಷಕಿ ಕಲಾವತಿ ಪಟಗಾರ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುವರ್ಣ ನಾಯ್ಕ, ಉಪಸ್ಥಿತರಿದ್ದರು.
ರಾಜು ನಾಯ್ಕ, ಸ್ವಾಗತಿಸಿ, ಮಹೇಶ ಭಂಡಾರಿ ವಂದಿಸಿದರು. ಶಿಕ್ಷಕರಾದ ರೋಹಿದಾಸ ನಾಯ್ಕ, ಸುಭಾಸ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಮೂರು ಮುತ್ತು ತಂಡದಿಂದ ನಾಟಕ ಪ್ರದರ್ಶನಗೊಂಡಿತು.