ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಕೆಪಿಸಿಎಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ಗಳನ್ನು ಕೆ.ಪಿ.ಸಿಯವರು ತುಂಬದೆ ಕಾರ್ಮಿಕರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಗಣೇಶಗುಡಿಯಲ್ಲಿ ಕರ್ನಾಟಕದ ವಿದ್ಯುತ್ ನಿಗಮ ಗುತ್ತಿಗೆ ನೌಕರರ ಸಂಘ ಗಣೇಶಗುಡಿ ಸಾರ್ವಜನಿಕರು ಉಪವಿಭಾಗಾಧಿಕಾರಿಗೆ ಮನವಿ ಮಾಡಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ಗುತ್ತಿಗೆ ಆಧಾರಿತ ನೌಕರರು ಕೆ.ಪಿ.ಸಿ.ಎಲ್ ನಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಒಂದು ವರ್ಷಗಳಿಂದ ನಮಗೆ ಸರ್ಕಾರ ನಿಗದಿ ಪಡಿಸಿರುವ ನಿಯಮಗಳ ಪ್ರಕಾರ PF, ESI ಗಳನ್ನು ಕಾರ್ಮಿಕರಾಗಿರುವ ನಮ್ಮ ಹೆಸರಿನಲ್ಲಿ ಬರಿಸದೇ ಮೋಸ ಮಾಡುತ್ತಿದ್ದಾರೆ, ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಕಾರ್ಮಿಕರಾದ ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.