Slide
Slide
Slide
previous arrow
next arrow

ಗೋವಿನ ಒಂದು ಹನಿ ರಕ್ತವೂ ಭಾರತದ ಭೂಮಿಯನ್ನು ಸೋಕಬಾರದು: ರಾಘವೇಶ್ವರ ಶ್ರೀ

300x250 AD

ಸಿದ್ದಾಪುರ: ನಾವು ವರ್ಷದಲ್ಲಿ ಅನೇಕ ದಿನಗಳನ್ನು ವಿಶೇಷ ದಿನವೆಂದು ಆಚರಿಸುತ್ತೇವೆ. ಆದರೆ ನಮಗೆ ಅಮೃತ ಸಮಾನವಾದ ಹಾಲನ್ನು ನೀಡಿ ಪಾಲಿಸುವ ಗೋವಿನ ದಿನವನ್ನು ಮಾತ್ರ ಆಚರಿಸುತ್ತಿಲ್ಲ. ವರ್ಷದಲ್ಲಿ ಒಂದು ದಿನವನ್ನಾದರೂ ದೇಶೀ ಗೋದಿನವನ್ನಾಗಿ ಆಚರಿಸುವಂತಾಗಬೇಕು ಎಂದು ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಅವರು ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠ ಆವಾರದ ಗೋಸ್ವರ್ಗದಲ್ಲಿ ನಡೆಯುತ್ತಿರುವ ಗೋದಿನ-ಗೋವಿಗಾಗಿ ಆಲೆಮನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಗೋವಿನ ಸಂರಕ್ಷಣೆಯಲ್ಲಿ ವಿವಿಧ ರೀತಿಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ನಾಲ್ವರಿಗೆ ‘ಗೋಪಾಲ ಗೌರವ’ ಪ್ರಶಸ್ತಿಯನ್ನು ಅನುಗ್ರಹಿಸಿ ಆಶೀರ್ವಚನ ನೀಡುತ್ತಿದ್ದರು.
ಗೋವಿನ ಒಂದು ಹನಿ ರಕ್ತವೂ ನಮ್ಮ ರಾಜ್ಯವಲ್ಲದೇ ಭಾರತದ ಭೂಮಿಯನ್ನು ಸೋಕಬಾರದು. ಆ ರೀತಿಯಲ್ಲಿ ಎಲ್ಲರೂ ಗೋವಿನ ಸಂರಕ್ಷಣೆಗೆ ಮುಂದಾಗಬೇಕು ಎಂದ ಶ್ರೀಗಳು, ಇಂದು ಗೋಪಾಲ ಗೌರವ ಪ್ರಶಸ್ತಿಗೆ ಭಾಜನರಾದವರು ನಿಸ್ಪೃಹವಾಗಿ, ತ್ರಿಕರಣಪೂರ್ವಕವಾಗಿ ಗೋ ಸೇವೆ ಮಾಡಿದವರು. ಅವರಿಗೆ ಇಂದು ನೀಡಲಾಗಿರುವ ಗೋಪಾಲ ಗೌರವ ಗೋಸೇವಕರ ಶಕ್ತಿಯನ್ನು ಇಮ್ಮಡಿ, ನರ‍್ಮಡಿ ಮಾಡಲಿ. ಆ ಮೂಲಕ ದೇಶಿ ಗೋಸಂತತಿಯ ಔನ್ನತ್ಯವಾಗಲಿ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.
ಗೋಪಾಲ ಗೌರವ: ರಾಜ್ಯ ಮಟ್ಟದ ‘ಗೋಪಾಲ ಗೌರವ’ ಪ್ರಶಸ್ತಿಯನ್ನು ಮಂಡ್ಯದ ಕೆ.ಜಿ.ಅನಂತರಾವ್, ತುಮಕೂರಿನ ಸಿ.ವಿ.ರಮಾದೇವಿ ಮಧುಗಿರಿ, ಮೂಡಿಗೆರೆಯ ನಿವೃತ್ತ ಪಶು ಪರಿವೀಕ್ಷಕ ಕ.ದಾ.ಕೃಷ್ಣರಾಜೇ ಅರಸು, ವಿಜಯಪುರ ನಿಡೋಣಿಯ ಗುರುಪಾದ ನಿಡೋಣಿ ಇವರುಗಳಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಕೆ.ಜಿ.ಅನಂತರಾವ್ ಮಾತನಾಡಿ, ದೇಶಿ ಗೋವಿನ ಸಗಣಿ ಪವಿತ್ರವಷ್ಟೇ ಅಲ್ಲ, ಭೂಮಿಗೆ ಫಲವತ್ತತೆ ನೀಡುವ, ಆ ಮೂಲಕ ಬಂಜೆತನ ದೂರಮಾಡುವ ಗುಣ ಹೊಂದಿದೆ ಎಂದರು. ಇಡೀ ಮಂಡ್ಯ ಜಿಲ್ಲೆ ರಾಷ್ಟಕ್ಕೆ ಮಾದರಿಯಾಗುವಂತೆ ವಿಷಮುಕ್ತ, ಬಲಿಷ್ಠ ಮಾಡುವಲ್ಲಿ ಶ್ರಮಿಸಲು ಸಂಘಟನೆಗೆ ಮುಂದಾಗಿದ್ದೇವೆ ಎಂದರು.
ಪ್ರಶಸ್ತಿ ಪುರಸ್ಕೃತ ಕ.ದಾ. ಕೃಷ್ಣರಾಜೇ ಅರಸು ಮಾತನಾಡಿ, ರಾಘವೇಶ್ವರ ಭಾರತೀ ಶ್ರೀಗಳವರ ಸಹಾಯ, ಆಶೀರ್ವಾದದಿಂದ 54 ಲೋಡ್‌ಗಳಷ್ಟು ದೇಶಿ ಗೋವುಗಳನ್ನು ಪ್ರೀತಿಯಿಂದ ಸಾಕುವವರಿಗೆ ಒದಗಿಸಿದ್ದೇನೆ. ಭಾರತ ದೇಶದಲ್ಲಿ ಗೋಹತ್ಯೆ ನಿಷೇಧವಾಗುವವರೆಗೂ ಕೇಶ ತೆಗೆಯುವುದಿಲ್ಲವೆಂಬ ಪ್ರತಿಜ್ಞೆ ಕೈಗೊಂಡಿದ್ದೇನೆ ಎಂದರು.
ಪ್ರಶಸ್ತಿಯ ಪ್ರಾಯೋಜಕತ್ವ ವಹಿಸಿದ್ದ ದಿನೇಶ ಶಹ್ರಾ ಫೌಂಡೇಶನ್ ಟ್ರಸ್ಟ್ನ ಮುಖ್ಯಸ್ಥ ದಿನೇಶ ಶಹ್ರಾ, ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ದಾನಿ ಎನ್.ಎಚ್.ಇಲ್ಲೂರ, ಡಾ.ವೈ.ವಿ.ಕೃಷ್ಣಮೂರ್ತಿ, ಶಿವಮೊಗ್ಗಾ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ನಿಸ್ರಾಣಿ ಮುಂತಾದವರು ಉಪಸ್ಥಿತರಿದ್ದರು. ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಸ್ವಾಗತಿಸಿದರು. ಗೋದಿನ ಸಮಿತಿ ಅಧ್ಯಕ್ಷ ಎಂ.ಜಿ.ರಾಮಚಂದ್ರ ಮರ್ಡುಮನೆ ಪ್ರಾಸ್ತಾವಿಕ ಮಾತನಾಡಿದರು. ಚಂದನ ಕಾಳಮಂಜಿ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top