Slide
Slide
Slide
previous arrow
next arrow

ಶ್ರೀನಿಕೇತನದಲ್ಲಿ ಭಾರತ ಸೇವಾದಳ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಯಶಸ್ವಿ

300x250 AD

ಶಿರಸಿ:  ಸ್ವಾಮಿ ವಿವೇಕಾನಂದ ಜಯಂತಿಯಂದು ನಿಯೋಜನೆಗೊಂಡ ಶಿರಸಿ ತಾಲೂಕಾ ಮಟ್ಟದ ಭಾರತ ಸೇವಾದಳ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವು ತಾಲೂಕಿನ ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಉಪಸ್ಥಿತರಿದ್ದು ಸಂಘಟಿತ ಯುವ ಶಕ್ತಿಯಿಂದ ದೇಶದ ಇತಿಹಾಸವನ್ನೇ ಬದಲಿಸಬಹುದು. ಇಂದು ಮೇಳದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಯುವಾವಸ್ಥೆಗೆ ಸಮೀಪದಲ್ಲಿ ಇದ್ದೀರಿ, ಇನ್ನೆರಡು ವರ್ಷಗಳಲ್ಲಿ ಸಮಾಜ ನಿಮ್ಮನ್ನು ಯುವಕರೆಂದು ಗುರುತಿಸುತ್ತದೆ. ಯೌವ್ವನದ ಹೊಸ್ತಿಲಲ್ಲಿರುವ ನಿಮಗೆ ಸ್ವಾಮಿ ವಿವೇಕಾನಂದರ ಮಾತು ಪ್ರೇರಕವಾಗಿರಲಿ. ಹಾಗೆಯೇ ಸೇವಾದಳದ ತತ್ವ ಆದರ್ಶಗಳು ಭಗವದ್ಗೀತೆಯಿಂದ ಪ್ರೇರಕವಾಗಿ ಬಂದಿದ್ದು ವಿಶ್ವಮಾನ್ಯ ಗಾಂಧೀಜಿಯವರು ಭಗವದ್ಗೀತೆಯನ್ನು ತನ್ನ ತಾಯಿ ಎಂದು ಆರಾಧಿಸಿದವರು. ನಿಷ್ಕಾಮ ಕರ್ಮಯೋಗ ತಮಗೆಲ್ಲ ಆದರ್ಶ ಮತ್ತು ಅನುಕರಣೀಯ ಡಾ.ನಾ.ಸು. ಹರ್ಡೀಕರ್ ಶಿಸ್ತು, ಸಂಘಟನೆ ಇದರ ಪ್ರೇರಕ ಶಕ್ತಿ. ಹಾಗಾಗಿ ಈ ಮೂವರ ತತ್ವ ಆದರ್ಶವನ್ನು ಪಾಲಿಸಿ ಎಂದು ಆಶೀರ್ವಚಿಸಿದರು.

300x250 AD

ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಎಸ್.ನಾಯಕ  ಅಧ್ಯಕ್ಷತೆ ವಹಿಸಿದರು.  ಸಹಾಯಕ ಆಯುಕ್ತ ದೇವರಾಜ್ ಆರ್. ಉಪನಿರ್ದೇಶಕ‌ ಪಿ. ಬಸವರಾಜ,  ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ  ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಬಿ. ಗೌಡ್ರು, ಶ್ರೀನಿಕೇತನ‌ ಅಧ್ಯಕ್ಷ ಮೇಜರ್ ರಘುನಂದನ ಹೆಗಡೆ,ತಹಶಿಲ್ದಾರ ಶ್ರೀಧರ ಮುಂದಲಮನಿ, ಇಸಳೂರು‌ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ನರೇಶ ಭಟ್ಟ ಇವರು ಬೆಳಿಗ್ಗೆ 9-15ಕ್ಕೆ ಸರಿಯಾಗಿ ಧ್ವಜಾರೋಹಣ ನೆರವೇರಿಸಿ ಗೌರವರಕ್ಷೆ ಪಡೆದು, ಪಡೆನಿರೀಕ್ಷಣೆ ಮಾಡಿದರು. ನಂತರದಲ್ಲಿ ವಿದ್ಯಾರ್ಥಿಗಳಿಂದ ಮಾರ್ಚಿಂಗ್ ಹಾಗೂ ಕವಾಯತುಗಳು ಪ್ರಾರಂಭಗೊಂಡವು. ತಾಲೂಕಿನ ವಿವಿಧ ಶಾಲೆಗಳಿಂದ ನೂರಕ್ಕೂ ಹೆಚ್ಚು ಶಾಖಾ ನಾಯಕ/ಕಿಯರು ಹಾಗೂ 1,200ಕ್ಕೂ ಹೆಚ್ಚು ಭಾರತ ಸೇವಾದಳ ವಿದ್ಯಾರ್ಥಿಗಳು ಹಾಜರಿದ್ದರು.  ಭಾರತ ಸೇವಾದಳದ ಚಟುವಟಿಕೆ ನಿರ್ವಹಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಾರತ ಸೇವಾದಳ ತಾಲೂಕಾ ಸಮಿತಿ ಅಧ್ಯಕ್ಷ ಅಶೋಕ ವಿ. ಭಜಂತ್ರಿ ವಹಿಸಿದ್ದರು. ಪಿಎಸ್.ಐ ಗ್ರಾಮಾಂತರ ಈರಯ್ಯ ಇವರು ಪಡೆನಿರೀಕ್ಷಿಸಿ ವಂದನೆ ಸ್ವೀಕರಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ದಿನೇಶ ಶೇಟ್, ಭಾರತ ಸೇವಾದಳ ಜಿಲ್ಲಾ ಸಮಿತಿ ಕಾರ್ಯದರ್ಶಿ ಪ್ರೊ.ಕೆ.ಎಸ್.ಹೊಸ್ಮನಿ, ಜಿಲ್ಲಾ ದೈ. ಶಿಕ್ಷಣ ಅಧಿಕಾರಿಗಳು (ಪ್ರಭಾರೆ) ಪ್ರಕಾಶ ತಾರಿಕೊಪ್ಪ, ಸುರೇಶ ಪಟಗಾರ,ಭಾ.ಸೇ.ದ.ಶಿರಸಿ ಉಪಾಧ್ಯಕ್ಷೆ ಶ್ರೀಮತಿ ವೀಣಾ ಭಟ್, ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ದೈ.ಶಿ.ಪರಿವೀಕ್ಷಕ ಬಿ.ವಿ.ಗಣೇಶ, ಶ್ರೀನಿಕೇತನ ಉಪಪ್ರಾಚಾರ್ಯೆ  ಶ್ರೀಮತಿ ಸೀತಾ ಜೋಶಿ  ಇವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಭಾರತ ಸೇವಾದಳದ ಶಾಖಾ ನಾಯಕ/ಕಿಯರಿಗೆ ಸನ್ಮಾನಿಸಲಾಯಿತು. ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ನಡೆಸಿದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಿಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿಪತ್ರ ಹಾಗೂ ಶಾಲೆಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಅಂತಿಮವಾಗಿ ರಾಷ್ಟ್ರ ಧ್ವಜಾವರೋಹಣದೊಂದೊಗೆ ಕಾರ್ಯಕ್ರಮ ಸಂಪನ್ನಗೊಂಡಿತು.   ಭಾರತ ಸೇವಾದಳ ತಾಲೂಕಾ ಸಮಿತಿ ಅಧ್ಯಕ್ಷ ಅಶೋಕ ಭಜಂತ್ರಿ ಎಲ್ಲರನ್ನು ಸ್ವಾಗತಿಸಿದರು. ರಾಮಚಂದ್ರ ಹೆಗಡೆ ಕಾರ್ಯಕ್ರಮ ನಡೆಸಿಕೊಟ್ಟರು. ಉದಯ ಹೆಗಡೆ ನಿರೂಪಿಸಿದರೆ ಶ್ರೀಕುಮಾರ ನಾಯ್ಕ ವಂದಿಸಿದರು. ಸುಧಾಮ ಪೈ ಪರೆಡ್‌ಕಮಾಂಡರ್ ಆಗಿ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top