Slide
Slide
Slide
previous arrow
next arrow

ಜ.15 ಕ್ಕೆ ಶಿರಸಿಗೆ ಸಿಎಂ: ಅರಣ್ಯ ಅತಿಕ್ರಮಣದಾರರಿಂದ ಧರಣಿ

300x250 AD

ಶಿರಸಿ: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜನವರಿ 15 ರಂದು ಶಿರಸಿಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ  ಅಂದು ಮುಂಜಾನೆ 9.30 ರಿಂದ 11 ಗಂಟೆಯವರೆಗೆ ಶಿರಸಿಯ ಹಳೇ ಬಸ್‌ಸ್ಟಾಂಡ್ ಸರ್ಕಲ್, ಬಿಡ್ಕಿಬೈಲಿನ, ಗಾಂಧಿ ಪ್ರತಿಮೆ ಎದುರು ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಈಗಾಗಲೇ ಸಾಕಷ್ಟು ಬಾರಿ ವಿವಿಧ ರೀತಿಯ ಹೋರಾಟ ಮತ್ತು  ಪ್ರತಿಭಟನೆ ಜರುಗಿಸಿದಾಗಿಯೂ ಸರಕಾರ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಅರಣ್ಯವಾಸಿಗಳ ಸಮಸ್ಯೆಗಳನ್ನು ತಲುಪುವ ಉದ್ದೇಶದಿಂದ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

300x250 AD

 ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕಾಗಿ  ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top