ಹುಬ್ಬಳ್ಳಿ: ಫೆಬ್ರವರಿ 4 ರಿಂದ ಹುಬ್ಬಳ್ಳಿ- ಪುಣೆ ನೇರ ವಿಮಾನವನ್ನು ಪ್ರಾರಂಭಿಸಲು ಇಂಡಿಗೋ ತೀರ್ಮಾನಿಸಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ನೇರ ವಿಮಾನದ ಬೇಡಿಕೆಯಿತ್ತು. ಹೀಗಾಗಿ ಇಂಡಿಗೋ ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ನೇರ ವಿಮಾನ ಹಾರಾಟ ಆರಂಭಿಸಲು ನಿರ್ಧರಿಸಿದೆ.
ವೇಳಾಪಟ್ಟಿಯ ಪ್ರಕಾರ ಹುಬ್ಬಳ್ಳಿಯಿಂದ ಪುಣೆ ವಿಮಾನ (6E-7727) ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ (HBX) ಫೆಬ್ರವರಿ 4 ರಂದು ಸಂಜೆ 6:30ಕ್ಕೆ ಹೊರಟು ಪುಣೆ ವಿಮಾನ ನಿಲ್ದಾಣವನ್ನು (PNQ) ಸಂಜೆ 7:40ಕ್ಕೆ ತಲುಪುತ್ತದೆ. ಪುಣೆಯಿಂದ ಹುಬ್ಬಳ್ಳಿ ವಿಮಾನ (6E-7716) ರಾತ್ರಿ 8:00 ಗಂಟೆಗೆ ಪುಣೆ ವಿಮಾನ ನಿಲ್ದಾಣದಿಂದ (PNQ) ಹೊರಟು ರಾತ್ರಿ 9:10 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪುತ್ತದೆ.
ಇಂಡಿಗೋ ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗೆ ಅವಕಾವಿರುತ್ತದೆ. ವಿಮಾನವು ವಾರಕ್ಕೆ 2 ದಿನಗಳಲ್ಲಿ ಮಾತ್ರ (ಶನಿವಾರ ಮತ್ತು ಭಾನುವಾರ) ಕಾರ್ಯನಿರ್ವಹಿಸುತ್ತದೆ. ಬೇಡಿಕೆಯ ಆಧಾರದ ಮೇಲೆ ವಿಮಾನ ಹಾರಾಟವನ್ನು ಹೆಚ್ಚಿಸಲಾಗುತ್ತದೆ ಎಂದು ಇಂಡಿಗೋ ಹೇಳಿದೆ.