ಜೊಯಿಡಾ: ಇಲ್ಲಿನ ಕುಣಬಿ ಸಮುದಾಯದ ಭವನದಲ್ಲಿ ಕಾಳಿ ಪ್ರವಾಸೋದ್ಯಮ ಸಂಸ್ಥೆ, ತಾಲೂಕಾ ಕುಣಬಿ ಅಭಿವೃದ್ಧಿ ಸಂಘ, ಕಾಳಿ ರೈತ ಉತ್ಪಾದಕರ ಕಂಪನಿ, ಗಡ್ಡೆ ಗೆಣಸು ಬೆಳೆಗಾರರ ಸಂಘದ ಆಶ್ರಯದಲ್ಲಿ ಗಡ್ಡೆ ಗೆಣಸು ಮೇಳ ನಡೆಯಿತು.
ಮೇಳದಲ್ಲಿ ಹಲವಾರು ವಿಧದ ಗಡ್ಡೆ ಗೆಣಸುಗಳು ಮಾರಾಟಕ್ಕೆ ಆಗಮಿಸಿದ್ದವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗಡ್ಡೆ ಗೆಣಸು ಪ್ರಿಯರು ತಮಗೆ ಬೇಕಾದ ಗಡ್ಡೆ ಗೆಣಸು ಖರೀದಿಸಿ ಸಂತಸಪಟ್ಟರು. ಗಡ್ಡೆಗೆಣಸು ಮೇಳದಲ್ಲಿ ತಾಲೂಕಿನಲ್ಲಿ ಬೆಳಯಲಾದ ಬಹಳಷ್ಟು ವಿಧವಿಧವಾದ ಗಡ್ಡೆ ಗೆಣಸುಗಳನ್ನು ರೈತರು ಮಾರಾಟಕ್ಕೆ ಮತ್ತು ಪ್ರದರ್ಶನಕ್ಕೆ ತಂದಿದ್ದರು.
ಮಾಜಿ ಶಾಸಕ ಸುನೀಲ್ ಹೆಗಡೆ ಗಡ್ಡೆ ಗೆಣಸು ಮೇಳದಲ್ಲಿ ಭಾಗವಹಿಸಿ ಮಾತನಾಡಿ, ಗಡ್ಡೆ ಗೆಣಸು ತಾಲೂಕಿನ ವಿಶೇಷ ಬೆಳೆ, ಗಡ್ಡೆ ಗೆಣಸುಗಳನ್ನು ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಇಲ್ಲಿನ ರೈತರಿಗೆ ಗಡ್ಡೆ ಗೆಣಸು ಬೆಳೆಯುದರಿಂದ ಹೆಚ್ಚಿನ ಲಾಭ ದೊರೆಯುವ ಹಾಗೆ ಮಾಡಬೇಕಿದ್ದು, ಸೂಕ್ತ ಮಾರುಕಟ್ಟೆ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ ಎಂದರು. ಸಾವಿರಾರು ಜನರು ಗಡ್ಡೆ ಗೆಣಸು ಮೇಳಕ್ಕೆ ಬಂದು ತಮಗೆ ಇಷ್ಟವಾದ ಗಡ್ಡೆ ಗೆಣಸುಗಳನ್ನು ತೆಗೆದುಕೊಂಡು ಸಂತಸಪಟ್ಟರು.